
ಬೆಂಗಳೂರು: ಕಳೆದ ನಾಕೌಟ್ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ 27 ರನ್ಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಸದ್ಯ ತಮ್ಮ ಮುಂದಿನ ಪಂದ್ಯವನ್ನು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿರುವ ರಾಜಸ್ಥಾನ ರಾಯಲ್ಸ್ ವಿರುದ್ಧ ಸೆಣಸಾಡಲಿದೆ. ಇನ್ನು ಈ ಪಂದ್ಯಕ್ಕೂ ಮುನ್ನವೇ ಇದೀಗ ಭಾರೀ ಚರ್ಚೆಗಳು ಹುಟ್ಟುಕೊಂಡಿದ್ದು, ರಾಜಸ್ಥಾನ ವಿರುದ್ಧ ಆರ್ಸಿಬಿ ಗೆಲುವು ಖಚಿತ! ಅದರಲ್ಲೂ ಸುಲಭವಾಗಿ ಗೆಲ್ಲುವ ನಿರೀಕ್ಷೆಯಿದೆ ಎಂದು ವ್ಯಾಪಕವಾಗಿ ಹೇಳಲಾಗುತ್ತಿದೆ.
ಇದನ್ನೂ ಓದಿ: ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…
ಒಂದೆಡೆ ಕೆಕೆಆರ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಕ್ವಾಲಿಫೈರ್ 1ರಲ್ಲಿ ಫೈನಲ್ ಪ್ರವೇಶಕ್ಕಾಗಿ ಭರ್ಜರಿ ಕಾದಾಟ ನಡೆಸಲಿದೆ. ಮತ್ತೊಂದೆಡೆ, ಆರ್ಸಿಬಿ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಕೂಡ ಭಾರೀ ಪೈಪೋಟಿಗೆ ಸಜ್ಜಾಗಿದೆ. ಎಂದಿನಂತೆ ಪಂದ್ಯ ಆರಂಭಕ್ಕೂ ಮುನ್ನ ಯಾವ ಟೀಮ್ ಗೆಲ್ಲಲಿದೆ? ಎಂದು ನಿರೀಕ್ಷೆ ವ್ಯಕ್ತಪಡಿಸುವ ಕ್ರಿಕೆಟಿಗರು, ಈ ಬಾರಿಯೂ ಆರ್ಸಿಬಿಯೇ ಗೆಲುವು ದಾಖಲಿಸುವುದು ಖಚಿತ ಎನ್ನಲಾಗಿದೆ. ಆದರೆ, ಈಗ ಇದು ಮತ್ತಷ್ಟು ಸುಲಭ ಎಂದು ಹೇಳುವುದಕ್ಕೆ ಇಂಗ್ಲೆಂಡ್ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ನೀಡಿರುವ ಹೇಳಿಕೆಯೇ ಸಾಕ್ಷಿ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ತಂಡವು ಹೀನಾಯ ಸೋಲು ಕಂಡ ಕಾರಣ ಅಂಕಪಟ್ಟಿಯಲ್ಲಿ ಟಾಪ್ ಎರಡರಲ್ಲಿ ಸ್ಥಾನ ಗಳಿಸಲು ವಿಫಲವಾಯಿತು. ಸದ್ಯ ಆರ್ಆರ್ನ ಸ್ಪೋಟಕ ಬ್ಯಾಟ್ಸ್ಮನ್ ಜೋಸ್ ಬಟ್ಲರ್‌ನ ಅಲಭ್ಯತೆಯು ತಂಡಕ್ಕೆ ಹೊಡೆತ ನೀಡಿದೆ ಎನ್ನಲಾಗಿದ್ದು, ಈ ಕುರಿತು ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಕೂಡ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕಾರ್ಮಿಕರ ಸಂಖ್ಯೆ ವೃದ್ಧಿಸಿದ ನರೇಗಾ ಕೂಲಿ! ಸೃಜನೆಯಾದ 4.97 ಲಕ್ಷ ಮಾನವ ದಿನಗಳು 28293 ಕುಟುಂಬಗಳಿಗೆ ಕೆಲಸದ ಖುಷಿ
ರಾಜಸ್ಥಾನ ಪಡೆಗೆ ಪ್ಲೇಆಫ್‌ನಲ್ಲಿ ಆಂಗ್ಲರ ಕೊರತೆಯು ದೊಡ್ಡ ಸಮಸ್ಯೆಯಾಗಿ ಕಾಡಬಹುದು. ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ಲೇಆಫ್ ಪಂದ್ಯಗಳಿಗೂ ಮುಂಚಿತವಾಗಿ ತಮ್ಮ ರಾಷ್ಟ್ರೀಯ ತಂಡಕ್ಕೆ ಹಿಂತಿರುಗಿರುವ ಜೋಸ್ ಬಟ್ಲರ್ ಆರ್ಆರ್ನಲ್ಲಿ ಲಭ್ಯವಿಲ್ಲ ಎಂಬುದು ಸದ್ಯ ಯೋಚಿಸುವ ವಿಷಯ. ಬಟ್ಲರ್ ಅನುಪಸ್ಥಿತಿ ತಂಡದಲ್ಲಿ ವ್ಯತ್ಯಾಸಗಳನ್ನು ಉಂಟುಮಾಡಿದೆ. ಬಹುಶಃ ಮುಂದಿನ ಪಂದ್ಯದಲ್ಲಿ ಇದು ಆರ್ಸಿಬಿಗೆ ಪ್ಲಸ್ ಆಗಬಹುದು ಎಂದಿದ್ದಾರೆ.
ಮೈಕೆಲ್ ವಾನ್ ನೀಡಿದ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಆರ್ಸಿಬಿ ಅಭಿಮಾನಿಗಳಲ್ಲಿ ಮತ್ತಷ್ಟು ಗೆಲುವಿನ ಭರವಸೆ ಚಿಗುರಿಸಿದೆ. ಅಸಲಿಗೆ ಮುಂದಿನ ಪಂದ್ಯದಲ್ಲಿ ಯಾರ ಮುಡಿಗೆ ಗೆಲುವು ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).
ನಿವೃತ್ತಿ ಬಗ್ಗೆ ನಮಗೆ ಸ್ಪಷ್ಟನೆ ಇಲ್ಲ! ಆದ್ರೆ, ಹೋಗುವ ಮುನ್ನ ಧೋನಿ ಹೇಳಿದ್ದು ಇದೊಂದು ಮಾತು…
ಲೀಗ್ನಿಂದ ಹೊರಬಿದ್ದ MIಗೆ ನೀತಾ ಅಂಬಾನಿ ಕ್ಲಾಸ್; ರೋಹಿತ್, ಹಾರ್ದಿಕ್ಗೆ ವಿಶೇಷ ಕಿವಿಮಾತು!