ಇದು ‘ಪಾಸಿಟಿವ್‌’ ಸಪ್ತಪದಿ: ಕರೊನಾ ಬಂದರೂ ಡೋಂಟ್‌ ಕೇರ್‌- ನಡೆಯಿತು ಹೀಗೊಂದು ಮದುವೆ...

marraige
Published on

ಭೋಪಾಲ್‌: ಕರೊನಾ ಹಿನ್ನೆಲೆಯಲ್ಲಿ ಮದುವೆ ಮನೆಗಳಿಗೆ ಷರತ್ತು ವಿಧಿಸಲಾಗಿದೆ. ಆದರೆ ಮದುಮಕ್ಕಳಿಗೇ ಕರೊನಾ ಪಾಸಿಟಿವ್ ಬಂದುಬಿಟ್ಟರೆ ಗತಿ? ಮದುವೆಯನ್ನು ಅನಿವಾರ್ಯವಾಗಿ ಮುಂದೂಡಲೇಬೇಕು ಎಂದುಕೊಂಡರೆ ಅದು ತಪ್ಪು.

ಏಕೆಂದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ವಿವಾಹದಲ್ಲಿ ಪಾಸಿಟಿವ್‌ ಬಂದರೂ ಮದುವೆ ನೆರವೇರಿದ್ದು, ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದೆ.

ಮದುವೆಗೆ ಏಪ್ರಿಲ್‌ 19ರಂದು ಮುಹೂರ್ತ ಫಿಕ್ಸ್‌ ಆಗಿತ್ತು. ಎರಡೂ ಕುಟುಂಬದವರು ಕರೊನಾ ನಿಯಮಾನುಸಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡರು. ಆದರೆ ಮದುವೆಗೆ ಮುನ್ನವೇ ವರನಿಗೆ ಕರೊನಾ ಪಾಸಿಟಿವ್​ ಬಂತು. ಎರಡೂ ಕುಟುಂಬದವರು ಮದುವೆಯನ್ನು ಮುಂದೂಡುವ ಬಗ್ಗೆ ಯೋಚಿಸಿದರು.

ಆದರೆ ಹಾಗೆ ಮಾಡದೇ ನಿಗದಿಯಾಗಿರುವ ಒಳ್ಳೆಯ ಮುಹೂರ್ತದಲ್ಲಿಯೇ ಮದುವೆ ನಡೆಯಲಿ ಎನ್ನುವ ಕಾರಣಕ್ಕೆ ಮದುಮಕ್ಕಳಿಗೆ ಪಿಪಿಇ ಕಿಟ್‌ ಹಾಕಿಸಿ ಮುಹೂರ್ತದಲ್ಲಿಯೇ ಮದುವೆ ಮಾಡಿದ್ದಾರೆ. ಪಿಪಿಇ ಕಿಟ್​ ಧರಿಸಿ ಸಪ್ತಪದಿ ತುಳಿದಿದ್ದಾರೆ. ಇವರ ಜತೆ ಕುಟುಂಬಸ್ಥರು, ಪುರೋಹಿತರೂ ಪಿಪಿಇ ಕಿಟ್‌ ಧರಿಸಿ ಮದುವೆಗೆ ಸಾಕ್ಷಿಯಾದರು.

ಇಲ್ಲಿದೆ ನೋಡಿ ಸಪ್ತಪದಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net