More

    ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ

    ಬೆಂಗಳೂರು: ಕರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಆಸ್ಪತ್ರೆ, ಆಂಬ್ಯುಲೆನ್ಸ್‌ ಸೇರಿದಂತೆ ಹಣಕ್ಕಾಗಿ ಹಪಹಪಿಸುವ ಧನದಾಹಿಗಳ ಅಮಾನವೀಯ ವರ್ತನೆಯನ್ನು ಇತ್ತೀಚೆಗಷ್ಟೇ ತೀವ್ರವಾಗಿ ಖಂಡಿಸಿದ್ದ ಜಗ್ಗೇಶ್ ಇದೀಗ ಮತ್ತೊಮ್ಮೆ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಈ ಕುರಿತು ಮುಖ್ಯಮಂತ್ರಿಗಳಿಗೆ ಅವರು ಟ್ವಿಟರ್‌ ಮೂಲಕ ಗಮನ ಸೆಳೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಒಳಕ್ಕೆ ಹೋಗುವವರ ಶವವಾಗಿ ಬಂದರೂ ಒಳಗಡೆ ಏನಾಗುತ್ತಿದೆ, ಯಾವ ಚಿಕಿತ್ಸೆ ನೀಡಲಾಗುತ್ತಿದೆ ಏನೊಂದೂ ಅರಿವಿಗೆ ಬಾರದೇ ಎಂಥ ಬಿಕ್ಕಟ್ಟಿನ ಪರಿಸ್ಥಿತಿಯನ್ನು ಕುಟುಂಬಸ್ಥರು ಅನುಭವಿಸುತ್ತಿದ್ದಾರೆ ಎನ್ನುವುದನ್ನು ಎಳೆಎಳೆಯಾಗಿ ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

    ಸರಣಿ ಟ್ವೀಟ್‌ನಲ್ಲಿ ಜಗ್ಗೇಶ್‌ ಹೇಳಿರುವುದು ಹೀಗೆ…
    ಮಾನ್ಯ ಮುಖ್ಯ ಮಂತ್ರಿಗಳ ಗಮನಕ್ಕೆ: ಸಾರ್, ಕರೊನಾ ರೋಗಿ ಅಡ್ಮಿಟ್ ಆದ 2-3 ದಿನಕ್ಕೆ ಸಾವು ಸಂಭವಿಸುತ್ತಿದೆ (ಸ್ವಂತ ಅನುಭವ). ಯಾವ ಚಿಕಿತ್ಸೆ ನೀಡುತ್ತಾರೆ ಎಂಬುದು ಬಂಧುಗಳಿಗೆ ಹೊರಗೆ ತಿಳಿಯದು! ಸಾವಾಗಿದೆ ಎಂದು ತಿಳಿಸುತ್ತಾರೆ ಮುಖಸಹಿತ ನೋಡಲಾಗದು! ಬೆರಳೆಣಿಸುವ ಕೆಲ ಸಿಬ್ಬಂದಿ ಹೊರತುಪಡಿಸಿ ತಜ್ಞರು ವೈಯುಕ್ತಿಕವಾಗಿ ಸಿಗರು ವಿಷಯ ತಿಳಿಯಲು!
    ಪ್ರತಿ ರೋಗಿಯ ಮನೆಯವರಿಗೆ ದೂರದಿಂದ ನೋಡಲು ಅವಕಾಶ (safety measures) ನೀಡಬೇಕು! ಇಲ್ಲದಿದ್ದರೆ ಒಳಗೆ ನಡೆಯುವ ವಿಷಯ ಹೊರಗೆ ಅರಿವಾಗುವುದಿಲ್ಲ.

    ಪ್ರತಿ ಕೋವಿಡ್ ರೋಗಿಗೆ treatment protocol ಇರುತ್ತದೆ; ಅವುಗಳೆಂದರೆ 1)chest ct scan, 2)infection monitor stages, 3)beginning and after infection, 4)inform each stage.. ·ಇದು ಯಾವುದು ಇಲ್ಲದೇ ಅಡ್ಮಿಟ್‌ ಮಾಡಿಕೊಂಡು ನಂತರ ಯಾವ ವಿಷಯ ಹೊರಗೆ ತಿಳಿಸದೆ ರೋಗಿಯ ಸಾವಿನ ಜತೆ ಮನೆಯವರು ಸಾಯುವಂತೆ ಟೆನ್ಷನ್‌ ಕೊಡುತ್ತಾರೆ. ಒಳ ಅರಿವಿರದವರು ಸರ್ಕಾರದ ಕಾರ್ಯ ಶ್ರಮ ದೂಷಣೆ ಮಾಡಿ ಸತ್ಯ ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ!

    ದಯಮಾಡಿ ರೋಗಿಯನ್ನು ಮಾನಿಟರ್‌ ಮಾಡುವ ಡಾಕ್ಟರ್‌ಗಳು ಬಂಧುಗಳಿಗೆ ವಿಷಯ ತಿಳಿಯುವಂಥ ಪಾರದರ್ಶಕ ವ್ಯವಸ್ಥೆ ಆಗಲಿ…
    ಇತಿ ತಮ್ಮ ನವರಸನಾಯಕ ಜಗ್ಗೇಶ್‌…

    ಹೀಗೆಂದು ಬರೆದುಕೊಂಡಿದ್ದಾರೆ. ಇಬ್ಬರು ಬಂಧುಗಳು, ಮೂವರು ಸ್ನೇಹಿತರನ್ನು ಕರೊನಾದಿಂದ ಒಂದೇ ದಿನ ಕಳೆದುಕೊಂಡಿದ್ದ ಜಗ್ಗೇಶ್‌ ಅವರು ಕಳೆದ ವಾರ ಟ್ವೀಟ್‌ ಮೂಲಕ ಇಂದಿನ ವ್ಯವಸ್ಥೆಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts