More

    ಗೀತಾ ಆಸ್ತಿ 40.04 ಕೋಟಿ ರೂ.ಗೆ ಏರಿಕೆ

    ಶಿವಮೊಗ್ಗ: ಕಾಂಗ್ರೆಸ್ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಗೀತಾ ಶಿವರಾಜ್ ಕುಮಾರ್ ಆಸ್ತಿ ಮೌಲ್ಯದಲ್ಲಿ ಅಪಾರ ಏರಿಕೆಯಾಗಿದೆ. 2014ರಲ್ಲಿ ಅವರು 75.67 ಲಕ್ಷ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರು. ಈಗ ಅವರ ಬಳಿ 5.54 ಕೋಟಿ ರೂ.ಮೌಲ್ಯದ ಚರಾಸ್ತಿಯಿದೆ. 10 ವರ್ಷದ ಹಿಂದೆ ಅವರ ಬಳಿ 6.17 ಕೋಟಿ ರೂ. ಬೆಲೆಯ ಸ್ಥಿರಾಸ್ತಿಯಿತ್ತು. ಈಗ ಅದರ ಮೌಲ್ಯ 34.50 ಕೋಟಿ ರೂ.ಗೆ ಏರಿದೆ.

    ಅವರ ಪತಿ ಎಂ.ಎಸ್.ಪುಟ್ಟಸ್ವಾಮಿ ಅಲಿಯಾಸ್ ಶಿವರಾಜ್‌ಕುಮಾರ್ ಬಳಿ 18 ಕೋಟಿ ರೂ. ಮೌಲ್ಯದ ಚರಾಸ್ತಿ ಹಾಗೂ 31 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯಿದೆ. ಆಸ್ತಿ ಗಳಿಕೆಯಲ್ಲಿ ಪತಿಗಿಂತಲೂ ಗೀತಾ ಮುಂದಿದ್ದಾರೆ. 10 ವರ್ಷಗಳ ಹಿಂದೆ ಪತಿಯಿಂದ 83.77 ಲಕ್ಷ ರೂ. ಸಾಲ ಪಡೆದಿದ್ದ ಗೀತಾ, ಈಗ ಶಿವರಾಜ್‌ಕುಮಾರ್‌ಗೆ ಆರು ಕೋಟಿ ರೂ. ಸಾಲ ಮರಳಿಸಬೇಕಿದೆ. ಗೀತಾ ಒಟ್ಟು 7.14 ಕೋಟಿ ರೂ. ಸಾಲ ತೀರಿಸಬೇಕಿದೆ. ಶಿವರಾಜ್‌ಕುಮಾರ್ ಪಾವತಿಸಬೇಕಿರುವ ಸಾಲದ ಮೊತ್ತ 17.01 ಕೋಟಿ ರೂ., ಗೀತಾ ಬಳಿ ಮೂರು ಲಕ್ಷ ರೂ. ಹಾಗೂ ಶಿವಣ್ಣ ಬಳಿ 22.58 ಲಕ್ಷ ರೂ. ನಗದು ಇದೆ.
    ಪಿತ್ರಾರ್ಜಿತ ಆಸ್ತಿಯಿಲ್ಲ: ವಿಶೇಷವೆಂದರೆ ಮಾಜಿ ಸಿಎಂ ಪುತ್ರಿಯಾದ ಗೀತಾ ಹಾಗೂ ವರನಟ ರಾಜ್‌ಕುಮಾರ್ ಪುತ್ರ ಶಿವರಾಜ್ ಕುಮಾರ್ ಇಬ್ಬರ ಬಳಿಯೂ ಯಾವುದೇ ಪಿತ್ರಾರ್ಜಿತ ಆಸ್ತಿಯಿಲ್ಲ. ಗೀತಾ ಹಾಗೂ ಶಿವರಾಜ್‌ಕುಮಾರ್ ಕನಕಪುರ ತಾಲೂಕಿನಲ್ಲಿ ಜಂಟಿ ಖಾತೆಯಲ್ಲಿ ತಲಾ 5.05 ಎಕರೆ ಕೃಷಿ ಜಮೀನು ಹೊಂದಿದ್ದಾರೆ. ಶಿವರಾಜ್‌ಕುಮಾರ್ ತಮಿಳುನಾಡಿನ ತಾಳವಾಡಿ ತಾಲೂಕಿನಲ್ಲಿ 3.46 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಗೀತಾ ಹೆಸರಿನಲ್ಲಿ ಒಂದು ವಾಣಿಜ್ಯ ಸಂರ್ಕೀಣವಿದೆ. ಮತ್ತೊಂದು ಮನೆ ಪತಿ, ಪತ್ನಿ ಜಂಟಿ ಖಾತೆಯಲ್ಲಿದೆ.
    ಶಿವಣ್ಣ ತೆರಿಗೆ ಬಾಕಿ:ನಟ ಶಿವರಾಜ್ ಕುಮಾರ್ ಸರ್ಕಾರಕ್ಕೆ 95.79 ಲಕ್ಷ ರೂ. ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. 63.49 ಲಕ್ಷ ರೂ. ತೆರಿಗೆಗೆ ಸಂಬಂಧಿಸಿದಂತೆ ವಿವಾದವಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಗೀತಾ ತನ್ನನ್ನು ಗೃಹಿಣಿ, ವಾಣಿಜ್ಯೋದ್ಯಮಿ ಹಾಗೂ ಸಮಾಜಸೇವಕಿ ಎಂದು ಗುರುತಿಸಿಕೊಂಡಿದ್ದಾರೆ. ಶಿವರಾಜ್‌ಕುಮಾರ್ ನಟ ಹಾಗೂ ಸಮಾಜಸೇವಕ ಎಂದು ಹೇಳಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts