More

    ಆನ್‌ಲೈನ್‌ನಲ್ಲಿ ಮೀನು ಖರೀದಿಸಿದ- ಪಾರ್ಸೆಲ್‌ ತೆಗೆದು ನೋಡಿದಾಗ ಇದ್ದದ್ದು ಜೀವಂತ ಮೊಸಳೆ!

    ಬೀಜಿಂಗ್: ಕರೊನಾದ ಈ ದಿನಗಳಲ್ಲಿ ಹೆಚ್ಚಿನವರು ಆನ್‌ಲೈನ್‌ ವಹಿವಾಟು ನಡೆಸುವುದು ಸಾಮಾನ್ಯವಾಗಿದೆ. ಅಂದರಂತೆ ಇಲ್ಲೊಬ್ಬ ಬಾಲಕ ಮೀನನ್ನು ಖರೀದಿಸಿದ್ದಾನೆ. ಆದರೆ ಮನೆಯ ಬಾಗಿಲಿಗೆ ಬಂದ ಪಾರ್ಸೆಲ್‌ ತೆಗೆದು ನೋಡಿದಾಗ ಅದರಲ್ಲಿ ಜೀವಂತ ಮೊಸಳೆ ಕಂಡು ಕಂಗಾಲಾಗಿ ಹೋಗಿದ್ದಾನೆ.

    ಇಂಥದ್ದೊಂದು ಘಟನೆ ನಡೆದಿರುವುದು ಚೀನಾದ ಬೀಜಿಂಗ್‌ನಲ್ಲಿ. ಬಾಲಕನೊಬ್ಬ ಮನೆಯಲ್ಲಿ ಸಾಕುವ ಸಲುವಾಗಿ ಮೀನುಗಳನ್ನು ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದಾನೆ. ಆರ್ಡರ್‌ ತಂದುಕೊಟ್ಟ ನಂತರ ಅದರಲ್ಲಿ ಸಿಯಾಮಿಸ್ ಎನ್ನು ತಳಿಯ ಮೊಸಳೆ ಇತ್ತು.

    ಇದನ್ನು ನೋಡಿ ಕಂಗಾಲಾದ ಬಾಲಕ ಆನ್‌ಲೈನ್‌ ಕಂಪೆನಿಗೆ ಕರೆ ಮಾಡಿದ್ದಾನೆ. ಕೂಡಲೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಅದನ್ನು ಅಲ್ಲಿ ಒಪ್ಪಿಸಿದ್ದಾರೆ. ಈ ಮೊಸಳೆ ತಳಿ ಅಳಿವಿನಂಚಿನಲ್ಲಿರುವ ಜೀವಿಯಾಗಿದೆ ಎನ್ನಲಾಗಿದ್ದು, ಇದನ್ನು ಹಿಡಿಯುವುದು ಇಲ್ಲಿ ಕೂಡ ಅಪರಾಧವಾಗಿದೆ.

    ಕ್ಷಮೆ ಕೋರಿರುವ ಆನ್‌ಲೈನ್‌ ಕಂಪೆನಿ, ನಾವು ಈ ಅಪರಾಧ ಮಾಡಲಿಲ್ಲ. ಒಂದು ವೇಳೆ ಇದು ನಿಜವಾಗಿದ್ದಲ್ಲಿ ಕೊರಿಯರ್‌ ಡೆಲಿವರಿ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

    ಆಕ್ಸಿಜನ್‌ ಇದ್ದರೂ ಸೋಂಕಿತರ ಪ್ರಾಣ ಕಾಪಾಡಲಾಗದೇ ಕಣ್ಣೀರಿಟ್ಟ ವೈದ್ಯರು- ಉಸಿರು ನಿಲ್ಲುವ ಮುನ್ನವೇ ನಡೆಯಿತು ಪವಾಡ!

    ಅರಬ್‌ ರಾಷ್ಟ್ರದಲ್ಲಿ ಹಾರಿತು ಭಾರತದ ಬಾವುಟ- ವಿದ್ಯುದ್ದೀಪಗಳಿಂದ ಅಲಂಕರಿಸಿ ಭಿನ್ನವಾಗಿ ನೀಡಿದರು ಸ್ಥೈರ್ಯ…

    ಎರಡು ದಿನ ವೈದ್ಯರ ಭೇಟಿಗೆ, ಎರಡೂವರೆ ದಿನ ರಿಸಲ್ಟ್‌ಗೆ ಕಾದೆ ಎಂದ ಸಂಸದ ಶಶಿ ತರೂರ್‌ ಆಸ್ಪತ್ರೆಗೆ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts