More

    ಅರಬ್‌ ರಾಷ್ಟ್ರದಲ್ಲಿ ಹಾರಿತು ಭಾರತದ ಬಾವುಟ- ವಿದ್ಯುದ್ದೀಪಗಳಿಂದ ಅಲಂಕರಿಸಿ ಭಿನ್ನವಾಗಿ ನೀಡಿದರು ಸ್ಥೈರ್ಯ…

    ದುಬೈ: ವಿಶ್ವದೆಲ್ಲೆಡೆ ಕರೊನಾದ ಆರ್ಭಟ ಜೋರಾಗಿದೆ. ಅದರಲ್ಲಿಯೂ ಭಾರತದಲ್ಲಿ ಹಿಂದೆಂದಿಗಿಂತಲೂ ಕರೊನಾ ಉಗ್ರ ಸ್ವರೂಪ ತೋರಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದರೂ, ಯಾವುದೇ ಲಕ್ಷಣಗಳು ಇಲ್ಲದೇ ಕರೊನಾ ಸೋಂಕು ಎರಗುತ್ತಿದ್ದು, ಸದ್ದಿಲ್ಲದೇ ಪ್ರಾಣ ಕಸಿದುಕೊಳ್ಳುತ್ತಿದೆ.

    ಈ ನಡುವೆ ಭಾರತಕ್ಕೆ ಬೆಂಬಲವಾಗಿ ಅನೇಕ ರಾಷ್ಟ್ರಗಳು ನಿಂತಿವೆ. ಇದೀದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾರತಕ್ಕೆ ವಿಭಿನ್ನ ರೀತಿಯಲ್ಲಿ ಕರೊನಾ ವಿರುದ್ಧದ ಹೋರಾಟಕ್ಕೆ ಬೆಂಬಲ ಹಾಗೂ ಆತ್ಮಸ್ಥೈರ್ಯ ತುಂಬಿದೆ. ದುಬೈನಲ್ಲಿನ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಹಾಗೂ ಅಬುದಾಬಿಯ ಅಡನಾಕ್ ಹೆಡ್‌ಕ್ವಾಟರ್ಸ್ ಕಟ್ಟಡದಲ್ಲಿ ಭಾರತದ ಧ್ವಜದ ತ್ರಿವರ್ಣವನ್ನು ಹಾರಿಬಿಡುವ ಮೂಲಕ ಯುಎಇ ಭಾರತದ ಬೆನ್ನಿಗೆ ನಿಂತಿದೆ.

    ಭಾರತದ ತ್ರಿವರ್ಣ ಧ್ವಜವನ್ನು ವಿದ್ಯುತ್ ದೀಪಗಳಿಂದ ಪ್ರತಿಬಿಂಬಿಸುವ ಮೂಲಕ “ಸ್ಟೇ ಸ್ಟ್ರಾಂಗ್ ಇಂಡಿಯಾ” ಎಂಬ ಸಂದೇಶವನ್ನು ಭಾನುವಾರ ರಾತ್ರಿ ಬಿತ್ತರಿಸಲಾಗಿದೆ.

    ಈ ಕುರಿತು ಖುದ್ದಾಗಿ ಯುಎಇ ಭಾರತೀಯ ರಾಯಭಾರ ಕಚೇರಿ ಟ್ವಿಟ್ಟರ್‌ನಲ್ಲಿ ವಿಡಿಯೋದೊಂದಿಗೆ ಮಾಹಿತಿ ಹಂಚಿಕೊಂಡಿದೆ. ಈ ಸ್ಥೈರ್ಯಕ್ಕೆ ಕೃತಜ್ಞತೆ ಸಲ್ಲಿಸಿರುವ ಯುಎಇಯಲ್ಲಿನ ಭಾರತೀಯ ರಾಯಭಾರಿ ಪವನ್ ಕಪೂರ್ ಇಂಥ ಕಷ್ಟದ ಸಮಯದಲ್ಲಿ ಯುಎಇ ತನ್ನ ಬೆಂಬಲ ವ್ಯಕ್ತಪಡಿಸಿರುವುದನ್ನು ಭಾರತ ಪ್ರಶಂಸಿಸುತ್ತದೆ ಎಂದಿದ್ದಾರೆ.

    ನೀರಿನೊಳಗೆ ಹೊಕ್ಕು ಪಾಣಿಪೀಠವ ಹತ್ತಿ ಶಿವನ ಪೂಜೆ ಮಾಡುವ ಜಗತ್ತಿನ ಏಕೈಕ ಅರ್ಚಕ ಹಂಪಿಯ ಕೃಷ್ಣ ಇನ್ನಿಲ್ಲ..

    ಎರಡು ದಿನ ವೈದ್ಯರ ಭೇಟಿಗೆ, ಎರಡೂವರೆ ದಿನ ರಿಸಲ್ಟ್‌ಗೆ ಕಾದೆ ಎಂದ ಸಂಸದ ಶಶಿ ತರೂರ್‌ ಆಸ್ಪತ್ರೆಗೆ ದಾಖಲು

    ಕರೊನಾದಲ್ಲಿದೆ ಮೂರು ಹಂತ- ದುಬಾರಿ ಮಾತ್ರೆ ಹಿಂದೆ ಓಡಬೇಡಿ… ಮನ್‌ ಕೀ ಬಾತ್‌ನಲ್ಲಿ ಸಲಹೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts