More

    ಜನರೊಂದಿಗೆ ಸೌಜನ್ಯದಿಂದ ವರ್ತಿಸಿ

    ಹೊಸಪೇಟೆ: ಪೊಲೀಸರು ಎಲ್ಲಿ ಕರ್ತವ್ಯ ನಿರ್ವಹಿಸುತ್ತಾರೋ ಅಲ್ಲಿ ಧ್ವಜ ಇರುತ್ತದೆ. ಪೊಲೀಸ್ ಧ್ವಜದ ಗೌರವ ಎತ್ತಿ ಹಿಡಿಯುವುದು ಪೊಲೀಸರ ಕರ್ತವ್ಯ ಎಂದು ವಿಜಯನಗರ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಹೇಳಿದರು.

    ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಕಾಪಾಡುವುದರಲ್ಲಿ ಪೊಲೀಸರ ಪಾತ್ರ ಬಹಳ ಮಹತ್ವದ್ದು. ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಬಹಳ ಉತ್ತಮ ಇಲಾಖೆಯಾಗಿದೆ. ಪೊಲೀಸರು ಇಲ್ಲದಿದ್ದರೆ ಸಮಾಜದಲ್ಲಿ ಅಶಾಂತಿ ತಲೆದೋರುತ್ತದೆ. ಪೊಲೀಸರು ಜನರೊಂದಿಗೆ ಸೌಜನ್ಯದಿಂದ ವರ್ತಿಸಿ ಗೌರವ ಕಾಪಾಡಿಕೊಳ್ಳಬೇಕು ಎಂದರು.

    ಪ್ರಾಣ ಕಾಪಾಡುವ ಜನಸ್ನೇಹಿ ಪೊಲೀಸರು ನಿವೃತ್ತಿ ನಂತರ ಉತ್ತಮ ಬದುಕು ಸಾಗಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ತಮ್ಮ ವೃತ್ತಿ ಬದುಕಿನಲ್ಲಿ ಅನೇಕ ಒತ್ತಡದಿಂದ ಕೆಲಸ ನಿರ್ವಹಿಸುವ ಪೊಲೀಸರಿಗೆನಿವೃತ್ತ ಪೊಲೀಸರ ಕ್ಷೇಮಾಭಿವೃದ್ಧಿ ಇಲಾಖೆಯಿಂದ ನಾನಾ ಯೋಜನೆಜಾರಿಗೆ ತರಲಾಗಿದೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು. ಜನರ ಮಾನ. ಸೇವೆಯಲ್ಲಿದ್ದು ನಿವೃತ್ತರಾಗಿರುವ ಪೊಲೀಸ್ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ದಿಗೆ ಪೊಲೀಸ್ ಧ್ವಜ ದಿನಾಚರಣೆ ದಿನಧ್ವಜಗಳನ್ನು ಮಾರಾಟ ಮಾಡುವ ಮೂಲಕನಿಧಿ ಸಂಗ್ರಹಿಸಲಾಗುತ್ತದೆ. ಇದನ್ನು ನಿವೃತ್ತರ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತದೆ. ಇದಕ್ಕೆ ಎಲ್ಲ ಸಾರ್ವಜನಿಕರ ಸಹಕಾರಬೇಕು ಎಂದರು.

    ನಿವೃತ್ತ ಪಿಎಸ್‌ಐ ವೆಂಕಟೇಶಲು ಮಾತನಾಡಿ, ನಮ್ಮ ಒಂದು ಕಣ್ಣು ನೌಕರಿಯ ಮೇಲೆ ಇಟ್ರೆ, ಮತ್ತೊಂದು ಕಣ್ಣು ಕುಟುಂಬದ ಮೇಲೆ ಇರಬೇಕು.  ಮಕ್ಕಳು ನಮ್ಮ ಅವಲಂಬನೆಯಾಗದAತೆ ನೋಡಿಕೊಳ್ಳೊ ರೀತಿಯಲ್ಲಿ ಉತ್ತಮ ಶಿಕ್ಷಣ ಕೊಡಿಸಬೇಕಿದೆ. ಇಲಾಖೆಯಲ್ಲಿ ನಾವು ಸೇವೆ ಸಲ್ಲಿಸುವುದರ ಜತೆಗೆ ಕುಟುಂಬಕ್ಕೆ ಆಧ್ಯತೆ ನೀಡಬೇಕಿದೆ ಎಂದರು.

    ನಿವೃತ್ತ ಆರ್‌ಎಸ್‌ಐ ತುಕ್ಯಾನಾಯ್ಕ್, ನಿವೃತ್ತ ಪಿಎಸ್‌ಐ ಶರಣಪ್ಪ ಮೇಟಿ ಮಾತನಾಡಿದರು. ಎಎಸ್ಪಿ ಸಲೀಂಪಾಷಾ, ಹೊಸಪೇಟೆ  ಡಿವೈಎಸ್ಪಿ ಶರಣಬಸವೇಶ್ವರ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐಗಳಾದ ಲಖನ್ ಮುಸುಗುಪ್ಪಿ, ಶ್ರೀಕಾಂತ್, ಅಶ್ವಥ್ ನಾರಾಯಣ, ಗುರುರಾಜ್, ಯಾತನೂರು, ದೀಪಕ್ ಬೂಸರೆಡ್ಡಿ, ಕಿರಣ್ ಸಾಮ್ರಾಟ್, ವಿಕಾಸ್ ಲಮಾಣಿ, ವಿನಾಯಕ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts