More

    ಪಂಜಾಬ್​: 48 ಕೆ.ಜಿ ಮಾದಕ ವಸ್ತು ವಶ, ಮೂವರ ಬಂಧನ

    ಚಂಡೀಗಢ: ಐದು ದೇಶಗಳಲ್ಲಿ ಕಾರ್ಯಾಚರಿಸುತ್ತಿರುವ ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಾಣೆಯ ಜಾಲ ಭೇದಿಸಿ ಸುಮಾರು 48 ಕೆ.ಜಿ ಹೆರಾಯಿನ್ ವಶಕ್ಕೆ ಪಡೆಯಲಾಗಿದೆ. ಈ ಜಾಲದಲ್ಲಿದ್ದ ಮೂವರು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

    ಇದನ್ನೂ ಓದಿ: ಚುನಾವಣೆಯಿಂದ 6 ವರ್ಷ ನರೇಂದ್ರ ಮೋದಿ ಅನರ್ಹತೆ: ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್

    ಈ ಮೂವರು ಆರೋಪಿಗಳಿಂದ 21 ಲಕ್ಷ ರೂಪಾಯಿ, ಮೂರು ಐಷಾರಾಮಿ ವಾಹನಗಳು, ನಗದು ಎಣಿಕೆ ಯಂತ್ರ ಕೂಡ ವಶಕ್ಕೆ ಪಡೆಯಲಾಗಿದೆ. ರಾಜ್ಯದಲ್ಲಿ ಈ ವರ್ಷ ವಶಪಡಿಸಿಕೊಳ್ಳಲಾದ ಭಾರಿ ಪ್ರಮಾಣದ ಮಾದಕ ವಸ್ತು ಪ್ರಕರಣ ಎಂದು ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ.

    ಈ ಜಾಲವು ದೇಶದ ಗಡಿಯಾಚೆಗಿನ ಮತ್ತು ಅಂತರ-ರಾಜ್ಯ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್ ಎರಡು ರಾಜ್ಯಗಳನ್ನು ವ್ಯಾಪಿಸಿರುವ ದೇಶೀಯ ಜಾಲದ ಜೊತೆಗೆ ಇರಾನ್, ಅಫ್ಘಾನಿಸ್ತಾನ, ಟರ್ಕಿ, ಪಾಕಿಸ್ತಾನ ಮತ್ತು ಕೆನಡಾದಲ್ಲೂ ಇವರ ವ್ಯಾಪ್ತಿ ಹರಡಿದೆ ಎಂದು ಯಾದವ್ ಹೇಳಿದ್ದಾರೆ.

    ಮಾದಕ ದ್ರವ್ಯ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಾದಕವಸ್ತು ಕಳ್ಳಸಾಗಣೆ ಜಾಲ ಪತ್ತೆ ಹಚ್ಚಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

    ಅಮಿತ್ ಷಾ ಭಾಷಣ ತಿರುಚಿದ ಪ್ರಕರಣ: ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts