More

    ಐಪಿಎಲ್‌ ಆಟಗಾರರ ಮೇಲೆ ಕರೊನಾ ಕರಿನೆರಳು- ಯಾರೇ ಹೋದರೂ ಡೋಂಟ್‌ ಕೇರ್‌ ಎಂದ ಬಿಸಿಸಿಐ

    ಚೆನ್ನೈ: ಕರೊನಾದ ಕರಿನೆರಳು ಎಲ್ಲೆಡೆಯೂ ವ್ಯಾಪಿಸಿರುವ ಹೊತ್ತಿನಲ್ಲಿಯೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಶುರುವಾಗಿದೆ. ಆದರೆ ಇದಾಗಲೇ ಕೆಲವು ಆಟಗಾರರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದೆ.

    ಡೆಲ್ಲಿ ಕ್ಯಾಪಿಟಲ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಪ್ರಸ್ತುತ ನಡೆಯುತ್ತಿರುವ ಆಟದಿಂದ ವಿರಾಮ ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಕೋವಿಡ್‌-19 ಕಠಿಣ ಸಮಯದಲ್ಲಿ ತಮ್ಮ ಕುಟುಂಬ ಹೋರಾಟಕ್ಕೆ ನೆರವು ನೀಡುವ ಸಲುವಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

    ಅವರ ಬೆನ್ನಲ್ಲೇ ಆರ್‌ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯಾದ ಕೇನ್‌ ರಿಚರ್ಡ್‌ಸನ್‌ ಮತ್ತು ಆ್ಯಡಂ, ಚಂಪಾ ಕೂಡ ಐಪಿಎಲ್‌ನಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ. ಇವರಿಗಿಂತ ಮೊದಲು ರಾಜಸ್ಥಾನದ ರಾಯಲ್ಸ್ ತಂಡದಲ್ಲಿದ್ದ ಆಸೀಸ್‌ ವೇಗಿ ಆ್ಯಂಡ್ರ್ಯೂ ಟೈ ಅವರೂ ನಿರ್ಗಮಿಸಿದ್ದರು. ಇದೀಗ ಕೇನ್‌ ಮತ್ತು ಆ್ಯಡಂ ಅವರು ವೈಯಕ್ತಿಕ ಕಾರಣದಿಂದಾಗಿ ದೂರ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಈ ಪಕಿ ಕೇನ‌ ಅವರು ಒಂದು ಪಂಡ್ಯ ಆದಿದ್ದು ಜಂಪಾ ಇನ್ನೂ ಆಟದ ಮೈದಾನಕ್ಕೆ ಇಳಿದಿರಲಿಲ್ಲ.

    ಆಟಗಾರರ ಈ ನಿರ್ಗಮನದಿಂದಾಗಿ ಐಪಿಎಲ್‌ ಟೂರ್ನಿಗೆ ಭಾರಿ ಹೊಡೆತ ಬಿದ್ದಿದೆ. ಆದರೆ ಯಾವುದೇ ಕಾರಣಕ್ಕೂ ಪಂದ್ಯ ನಿಲ್ಲುವುದಿಲ್ಲ. ಯಾರೇ ಹೋದರೂ ಆಟ ಮುಂದುವರೆಯಲಿದೆ ಎಂದು ಬಿಸಿಸಿಐ ಹೇಳಿರುವುದಾಗಿ ಮೂಲಗಳು ತಿಳಿಸಿವೆ. ಟೂರ್ನಿಯಲ್ಲಿ ಹೊರಹೋಗಲು ಬಯಸುವವರಿಗೆ ನಾವು ಬೇಡ ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ಇನ್ನುಳಿದ ಆಟಗಾರರ ಪೈಕಿ ಹಲವರು ಕರೊನಾದ ಈ ಬಿಕ್ಕಟ್ಟಿನ ದಿನಗಳಲ್ಲಿ ವಾಪಸ್‌ ತವರಿಗೆ ಹೋಗಿ ಅಲ್ಲಿ ಇರುವವರಿಗೂ ಆತಂಕ ಸೃಷ್ಟಿಸುವ ಬದಲು ಇಲ್ಲಿಯೇ ಇರುವುದು ಲೇಸೆಂದು ಬಗೆದಿರುವುದಾಗಿ ತಿಳಿದುಬಂದಿದೆ.

    ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ

    ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್‌ಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts