More

    ಕ್ರೀಡೆಗಳಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿ

    ಜಯಪುರ: ಕ್ರೀಡೆ ಮನುಷ್ಯನನ್ನು ಲವ ಲವಿಕೆಯಿಂದ ಇಡುವ ಸಾಧನವಾಗಿದ್ದು, ಒತ್ತಡದ ಜೀವನ ನಡೆಸುತ್ತಿರುವವರಿಗೆ ಕ್ರೀಡೆ ಅತ್ಯವಶ್ಯಕ ಎಂದು ಸಾಮಾಜಿಕ ಕಾರ್ಯಕರ್ತ ಪ್ರದೀಪ್ ಹೆಬ್ಬಾರ್ ಹೇಳಿದರು.
    ಸೋಮವಾರ ಶಾಂತಿ ಗ್ರಾಮ ಸರ್ಕಾರಿ ಶಾಲೆಯಲ್ಲಿ ನಡೆದ ಪಾಲಕರ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕ್ರೀಡೆಯಿಂದ ಮನುಷ್ಯನ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಪಾಲಕರಿಗಾಗಿ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ ಎಂದರು.
    ಸ್ಪಂದನ ಸಂಸ್ಥೆ ಅದ್ಯಕ್ಷ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಸರ್ಕಾರಿ ಶಾಲೆಗಳು ಉಳಿಯ ಬೇಕಾದರೆ ಪಾಲಕರ ಸಕ್ರಿಯತೆ ಮುಖ್ಯ.ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿಂದ ಗ್ರಾಮೀಣ ಭಾಗದ ಅನೇಕ ಶಾಲೆಗಳು ಮುಚ್ಚುತ್ತಿರುವುದು ದುರಂತ. ಗ್ರಾಮದ ಜನತೆ ಸರ್ಕಾರಿ ಶಾಲೆಗಳ ಉಳಿಯುವಿಕೆಗೆ ಗಮನ ವಹಿಸಬೇಕು ಎಂದರು.
    ಪತ್ರಕರ್ತ ಶಶಿ ಬೆತ್ತದಕೊಳಲು, ಮುಖ್ಯಶಿಕ್ಷಕ ಶ್ರೀನಿವಾಸ್, ದೈಹಿಕ ಶಿಕ್ಷಕ ಆನಂದ, ಅತಿಥಿ ಶಿಕ್ಷಕಿ ಅನುಷಾ, ಎಸ್‌ಡಿಎಂಸಿ ಅಧ್ಯಕ್ಷ ಕಿಟ್ಟಯ್ಯ, ಗ್ರಾಪಂ ಸದಸ್ಯೆ ಉದಯಕುಮಾರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts