More

    ಮಕ್ಕಳ ಮದುವೆಯನ್ನು ಹೀಗೂ ಸ್ಮರಣೀಯ ಮಾಡಬಹುದು ಎಂದು ತೋರಿಸಿಕೊಟ್ಟ ರೈತ- ಕೂಡಿಟ್ಟ ಹಣ ಆಕ್ಸಿಜನ್‌ಗೆ!

    ಭೋಪಾಲ್: ಕರೊನಾದ ಅಟ್ಟಹಾಸ ಮಿತಿಮೀರಿರುವ ಈ ದಿನಗಳಲ್ಲಿ ಎಲ್ಲೆಲ್ಲೂ ಆಕ್ಸಿಜನ್‌ ಕೊರತೆ ಇದೆ. ಜೀವವಾಯು ಸಿಗದೇ ಮೃತಪಡುತ್ತಿರುವವರ ಸಂಖ್ಯೆಯೂ ಏರುಗತಿಯಲ್ಲಿ ಸಾಗಿದೆ.

    ಬಹುತೇಕ ಮಂದಿ ಇಂಥ ಸಮಯದಲ್ಲಿ ಕೈಚೆಲ್ಲಿ ಕೂತಿರುವಾಗ ಇಲ್ಲೊಬ್ಬ ರೈತ ಮಾತ್ರ ಎಲ್ಲರೂ ಅಚ್ಚರಿ ಪಡುವಂಥ ಕೆಲಸ ಮಾಡಿದ್ದಾರೆ. ಮಗಳ ಮದುವೆಗಾಗಿ ಕೂಡಿಟ್ಟಿರುವ ಹಣವನ್ನು ಆಕ್ಸಿಜನ‌ ಖರೀದಿ ಮಾಡಲು ದೇಣಿಗೆ ನೀಡಿ ಔದಾರ್ಯ ಮೆರೆದಿದ್ದಾರೆ.

    ಗ್ವಾಲ್ ದೇವಿಯಾನ್ ಗ್ರಾಮದ ಚಂಪಾಲಾಲ್ ಗುರ್ಜರ್ ಅವರು ಎರಡು ಲಕ್ಷ ರೂ.ಗಳ ಚೆಕ್ ಅನ್ನು ಜಿಲ್ಲಾಧಿಕಾರಿ ಮಾಯಾಂಕ್ ಅಗ್ರವಾಲ್ ಅವರಿಗೆ ನೀಡಿದ್ದು, ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಬದಲು ಕೆಲವರ ಜೀವವನ್ನು ಉಳಿಸುವ ಪುಣ್ಯಕಾರ್ಯ ತಮ್ಮಿಂದಾಗಲಿ ಎಂದಿದ್ದಾರೆ.

    ಇವರ ಮಗಳು ಸನಿಕಾಓಳ ಮದುವೆ ನಿಶ್ಚಯವಾಗಿದೆ. ಮದುವೆಗೆಂದು ಇವರು ಹಣ ಹೊಂದಿಸಿ ಇಟ್ಟಿದ್ದರು. ಆದರೆ ಈಗ ಅದಕ್ಕಿಂತಲೂ ಮುಖ್ಯವಾದ ಕಾರ್ಯ ಜನರ ಜೀವ ಕಾಪಾಡುವುದು ಎಂದು ಎನಿಸಿ ಹೀಗೆ ಮಾಡಿದ್ದಾರೆ. ನನ್ನ ಮಗಳ ಮದುವೆಯನ್ನು ಸ್ಮರಣೀಯವಾಗಿಸಲು ನಾನು ಎರಡು ಲಕ್ಷವನ್ನು ಜಿಲ್ಲಾಡಳಿತಕ್ಕೆ ದೇಣಿಗೆ ನೀಡಿದ್ದೇನೆ ಇದರಿಂದ ಅವರು ಎರಡು ಆಮ್ಲಜನಕ ಸಿಲಿಂಡರ್‌ಗಳನ್ನು ಖರೀದಿಸಬಹುದು ಎಂದರು. ಮಗಳು ಕೂಡ ತಂದೆಯ ಕಾರ್ಯವನ್ನು ಮುಕ್ತಕಂಠದಿಂದ ಸ್ವಾಗತಿಸಿದ್ದಾರೆ.

    ಎಲ್ಲ ಪದವೀಧರರಿಗೂ ಬ್ಯಾಂಕ್‌ ಆಫ್‌ ಬರೋಡಾದಲ್ಲಿದೆ ಭರ್ಜರಿ ಅವಕಾಶ: 511 ಹುದ್ದೆಗಳಿಗೆ ಆಹ್ವಾನ- ನಾಲ್ಕೇ ದಿನ ಬಾಕಿ…

    ಅವಳು ಇವ್ರ ಮೊದಲ ಲವ್‌ ಅಂತೆ: ಎರಡು ಮಕ್ಕಳಾದ್ರೂ ಅವಳನ್ನು ನೋಡಿದ್ರೆ ಏನೇನೋ ಆಗತ್ತಂತೆ- ನಾನೇನು ಮಾಡ್ಲಿ?

    ಮಾತುಮಾತಿಗೂ ಕೇಸ್‌ ಹಾಕಿ ಪಾಪರ್‌ ಮಾಡ್ತೇನೆ ಎಂತಿದ್ದಾಳೆ ಹೆಂಡ್ತಿ: ಅವಳ ವಿರುದ್ಧ ನಾನು ಏನು ಮಾಡಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts