More

    ವಿಡಿಯೋಗಳನ್ನು ಹರಿಬಿಟ್ಟವರು ಯಾರು? 3 ಪ್ರತ್ಯೇಕ ತಂಡಗಳಿಂದ ತನಿಖೆ! 40 ಜಿಬಿ ಪೆನ್​ಡ್ರೈವ್​ಗಳು ಎಸ್​ಐಟಿ ವಶಕ್ಕೆ

    ಬೆಂಗಳೂರು: ಹಾಸನ ಸಂಸದ, ಲೋಕಸಭಾ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಆರೋಪ ಇದೀಗ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ನಿರ್ದೇಶಿಸಿದಂತೆ ಈ ಪ್ರಕರಣವನ್ನು ವಿಶೇಷ ತನಿಖಾ ದಳ (SIT) ಕೈಗೆತ್ತಿಕೊಂಡು, ಚುರುಕಿನ ತನಿಖೆ ಆರಂಭಿಸಿದೆ. ಈಗಾಗಲೇ ಮೂರು ಪ್ರತ್ಯೇಕ ತಂಡ ರಚಿಸಿರುವ ಎಸ್​ಐಟಿ, ಎಲ್ಲಾ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದೆ.

    ಇದನ್ನೂ ಓದಿ: 14 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭವಿಷ್ಯ ಭದ್ರ: ಮತಯಂತ್ರವಿರುವ ವಿಶ್ವವಿದ್ಯಾನಿಲಯದ ಸುತ್ತ ಸರ್ಪಗಾವಲು

    ಲೋಕಸಭಾ ಚುನಾವಣೆಯ ಸಮೀಪದಲ್ಲಿ ಈ ಘಟನೆ ನಡೆದಿರುವುದು ಸದ್ಯ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದು, ಕಾಂಗ್ರೆಸ್​ ಪಕ್ಷದ ನಾಯಕರು ಪ್ರಜ್ವಲ್ ರೇವಣ್ಣ, ಎಚ್​.ಡಿ. ಕುಮಾರಸ್ವಾಮಿ ಕುಟುಂಬದ ವಿರುದ್ಧ ಕೆಂಡಕಾರಿದ್ದಾರೆ. ಪ್ರಜ್ವಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ವಿಡಿಯೋ ಪ್ರಕರಣದ ತನಿಖೆ ಆಗಲೇಬೇಕು, ತಕ್ಕ ಶಿಕ್ಷೆ ವಿಧಿಸಬೇಕು. ಈ ಪ್ರಕರಣ ಇಡೀ ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ ಎಂದು ಆರೋಪಿಸಿದ್ದಾರೆ. ಇನ್ನು ಲೈಂಗಿಕ ದೌರ್ಜನ್ಯ ವಿಡಿಯೋಗಳು ಹಾಗೂ ಪೆನ್​ಡ್ರೈವ್ ಬಗ್ಗೆ ಮಾಹಿತಿ ಕಲೆಹಾಕಿರುವ ಎಸ್​ಐಟಿ 40 ಜಿಬಿ ಪೆನ್​ಡ್ರೈವ್ ಅನ್ನು ವಶಪಡಿಸಿಕೊಂಡಿದೆ.

    ವಿಡಿಯೋಗಳು ಹಾಗೂ ಪೆನ್​ಡ್ರೈವ್ ಬಗ್ಗೆ ತನಿಖೆ ನಡೆಸಲು ಎಸ್ಐಟಿಯಿಂದ ಮೂರು ತಂಡಗಳನ್ನು ರಚನೆ ಮಾಡಲಾಗಿದ್ದು, ಅಧಿಕಾರಿಗಳು ಒಟ್ಟು 40 ಜಿಬಿಯ ಪೆನ್​ಡ್ರೈವ್‍ಗಳನ್ನು ವಶಕ್ಕೆ ಪಡೆದಿದ್ದಾರೆ. 32 ಜಿಬಿ ಹಾಗೂ 8 ಜಿಬಿಯ ಪೆನ್​ಡ್ರೈವ್‍ಗಳನ್ನು ವಶಪಡಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

    ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

    ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts