ಇವರ‍್ಯಾರು ಬಲ್ಲಿರೇನು? ಬಾಲಿವುಡ್​ನ ಕ್ಯೂಟ್​ ನಟಿ- ನಿರ್ದೇಶಕ: ರಕ್ಷಾ ಬಂಧನಕ್ಕೆ ಅಣ್ಣ-ತಂಗಿ ಫೋಟೋ ವೈರಲ್​

stars
Published on

ಮುಂಬೈ: ನಾಳೆ (ಆಗಸ್ಟ್​ 12) ರಕ್ಷಾ ಬಂಧನ. ಸಹೋದರ- ಸಹೋದರಿಯ ಪ್ರೀತಿಯ ಮಹತ್ವ ಸಾರುವ ಈ ಹಬ್ಬಕ್ಕೆ ಸಹೋದರ- ಸಹೋದರಿಯರು ಕಾತರದಿಂದ ಕಾಯುತ್ತಿದ್ದಾರೆ. ಬಗೆಬಗೆಯ ರಕ್ಷಾ ಬಂಧನವನ್ನು ಅಕ್ಕ-ತಂಗಿಯರು ಸಿದ್ಧಪಡಿಸಿಕೊಂಡು ಸಹೋದರನಿಗೆ ಕಟ್ಟಲು ರೆಡಿ ಆಗುತ್ತಿದ್ದಾರೆ. ಹಲವರು ಸಹೋದರ- ಸಹೋದರಿಯ ಜತೆಗಿನ ಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಅದೇ ಇನ್ನೊಂದೆಡೆ ಸಿನಿ ತಾರೆಯರು ಕೂಡ ತಮ್ಮಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದು, ಇದೀಗ ಬಾಲಿವುಡ್​ನ ಖ್ಯಾತ ನಟಿಯೊಬ್ಬಳ ಫೋಟೋ ಭಾರಿ ವೈರಲ್​ ಆಗಿದೆ. ಅಣ್ಣನ ಜತೆಗಿರುವ ಬಾಲ್ಯದ ಫೋಟೋ ಶೇರ್​ ಮಾಡಿಕೊಂಡಿದ್ದಾರೆ ಈ ನಟಿ.

ನಿರ್ದೇಶಕ ಮತ್ತು ನಿರ್ಮಾಪಕನೂ ಆಗಿರುವ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಹೊಂದಿರುವ ಅಣ್ಣ ಕರ್ಣೇಶ್​ ಶರ್ಮಾ ಅವರ ಜತೆಗಿರುವ ಈ ನಟಿ ಯಾರೆಂದು ಊಹಿಸಬಲ್ಲಿರಾ? ಈಕೆ ಅನುಷ್ಕಾ ಶರ್ಮಾ.

2007ರ ಲಾಕ್ಮೆ ಫ್ಯಾಷನ್ ವೀಕ್​ನಲ್ಲಿ ಗಮನ ಸೆಳೆದ ಅನುಷ್ಕಾ, ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬದ್ಮಾಷ್ ಕಂಪೆನಿ, ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡಿರುವ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ "ಎನ್. ಹೆಚ್. 10" ಚಿತ್ರ ನಿರ್ಮಿಸಿದ್ದಾರೆ.

ಅಂದಹಾಗೆ, ಕರ್ಣೇಶ್ ಅವರು ಅನುಷ್ಕಾ ಅವರೊಂದಿಗೆ NH 10, ಪರಿ, ಫಿಲ್ಲೌರಿ, ಬುಲ್‌ಬುಲ್‌ನಂತಹ ಚಲನಚಿತ್ರಗಳು ಮತ್ತು ವೆಬ್‌ಸರಣಿಗಳನ್ನು ನಿರ್ಮಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net