ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ...

tatooactress
Published on

ಲಂಡನ್​: ಹಲವರಿಗೆ ಈಗ ಟ್ಯಾಟೂ ಹುಚ್ಚು. ತಮ್ಮ ಹೆಸರು, ಪ್ರೀತಿ ಪಾತ್ರರ ಹೆಸರು ಇಲ್ಲವೇ ತಮ್ಮಿಷ್ಟದ ಡಿಸೈನ್​ಗಳ ಟ್ಯಾಟೂ ಹಾಕಿಸಿಕೊಂಡರೆ, ಇನ್ನು ಕೆಲವರು ದೇವರ ದೊಡ್ಡ ದೊಡ್ಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ನಟಿ ಮಾಡಿರುವ ಸಾಹಸ ಕೇಳಿದರೆ ಹುಬ್ಬೇರಿಸುವುದು ಗ್ಯಾರೆಂಟಿ.

ಬ್ರಿಟನ್‌ನ 34 ವರ್ಷದ ಹಾಲಿವುಡ್ ನಟಿ ಬೆಕಿ ಹಾಲ್ಟ್​ ತನ್ನ ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳೆ. ಈ ಮೂಲಕ ದಾಖಲೆ ಸೃಷ್ಟಿಸಿದ್ದಾಳೆ. ಅದು ಎಷ್ಟರ ಮಟ್ಟಿಗೆ ಎಂದರೆ ತನ್ನ ಖಾಸಗಿ ಅಂಗದಲ್ಲಿಯೂ ಈಕೆ ಸ್ವಲ್ಪವೂ ಜಾಗ ಬಿಡದೇ ಟ್ಯಾಟೂ ಹಾಕಿಸಿಕೊಂಡಿದ್ದಾಳಂತೆ!

ಬೆಕಿ ಹಾಲ್ಟ್​ಗೆ ದೇಹಪೂರ್ತಿ ಟ್ಯಾಟೂ ಹಾಕಿಸಿಕೊಳ್ಳಲು ತಗಲಿರುವ ಸಮಯ ಒಂದು ವರ್ಷ. ಈಕೆ ಇದಕ್ಕಾಗಿ ಖರ್ಚು ಮಾಡಿದ್ದು, 42 ಸಾವಿರ ಡಾಲರ್​ (ಸುಮಾರು 33.33 ಲಕ್ಷ ರೂಪಾಯಿ). ಸೂಕ್ಷ್ಮ ಪ್ರದೇಶವಾಗಿರುವ ಖಾಸಗಿ ಅಂಗದಲ್ಲಿಯೂ ಈಕೆ ಟ್ಯಾಟೂ ಹಾಕಿಸಿಕೊಂಡಿದ್ದಾಳಂತೆ.

ಈ ಬಗ್ಗೆ ಹೇಳಿಕೊಂಡಿರುವ ಬೆಕಿ, ಆ ಜಾಗದಲ್ಲಿ ನನಗೆ ಟ್ಯಾಟೂ ಹಾಕಿಸಿಕೊಳ್ಳುವಾಗ ತುಂಬಾ ಅಂದರೆ ತುಂಬಾ ನೋವಾಯಿತು. ಜೀವವೇ ಹೋದ ಅನುಭವವಾಯಿತು. ಆದರೆ ಜಗತ್ತಿನ ಕೆಲವೇ ಕೆಲವು ಮಹಿಳೆಯರು ಈ ಸಾಹಸ ಮಾಡಿದ್ದಾರೆ. ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡಿರುವ ನಾನು ಆ ಜಾಗದಲ್ಲಿ ಬಿಟ್ಟರೆ ಅದು ದಾಖಲೆ ಆಗುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಎಷ್ಟೇ ನೋವಾದರೂ ಸಹಿಸಿಕೊಂಡು ತೀರಾ ಸೂಕ್ಷ್ಮ ಭಾಗದಲ್ಲಿಯೂ ಟ್ಯಾಟೂ ಹಾಕಿಸಿಕೊಂಡಿದ್ದೇನೆ ಎಂದಿದ್ದಾಳೆ.

ಖಾಸಗಿ ಅಂಗದ ಒಳ ಭಾಗದಲ್ಲಿ ಟ್ಯಾಟೂ ಹಾಕಿಸುವಾಗ ಖುದ್ದು ಕಲಾವಿದನಿಗೇ ಸುಸ್ತಾಯಿತು. ಆ ಒಂದು ಭಾಗಕ್ಕೆ ಹಚ್ಚೆ ಹಾಕುವಾಗ ಐದು ಬಾರಿ ವಿಶ್ರಾಂತಿ ತೆಗೆದುಕೊಂಡ. ಶ್ರಮಪಟ್ಟು ಅಂತೂ ಇಂತೂ ಯಶಸ್ವಿಯಾಗಿ ಟ್ಯಾಟೂ ಹಾಕುವ ಕಾರ್ಯ ಪೂರ್ಣಗೊಂಡಿತು ಎಂದಿದ್ದಾರೆ.

ತಾವು ಟ್ಯಾಟೂ ಹಾಕಿಸಿಕೊಂಡಿರುವ ಫೋಟೋಗಳನ್ನು ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net