

ಮುಂಬೈ: ಈಗೀಗ ಡೇಟಿಂಗ್, ಮದುವೆ, ವಿಚ್ಛೇದನ, ತಮಗಿಂತ ಚಿಕ್ಕವರನ್ನು ಮಹಿಳೆಯರು ಮದುವೆಯಾಗುವುದು ಹೊಸತಾಗಿ ಉಳಿದಿಲ್ಲ. ಅದರಲ್ಲಿಯೂ ಚಿತ್ರರಂಗದಲ್ಲಿ ಇವೆಲ್ಲಾ ತೀರಾ ಸಾಮಾನ್ಯವಾಗಿಬಿಟ್ಟಿದೆ. ಅಂಥದ್ದೇ ಇನ್ನೊಂದು ಜೋಡಿ ಖ್ಯಾತನಾಮರಾದ ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್.
ಇದೇ ವರ್ಷದ ಕೊನೆಗೆ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿರುವುದಾಗಿ ಸುದ್ದಿಯಾಗಿದೆ. 2016ರಿಂದ ಡೇಟಿಂಗ್ ನಡೆಸುತ್ತಿರುವ ಈ ಜೋಡಿ ಇದೀಗ ಮದುವೆಯಾಗುತ್ತಿದ್ದಾರಂತೆ. ನವೆಂಬರ್ ಇಲ್ಲವೇ ಡಿಸೆಂಬರ್ನಲ್ಲಿ ಇವರ ಮದುವೆ ಆಗಲಿದೆ ಎಂದು ಬಿ-ಟೌನ್ನಲ್ಲಿ ಸುದ್ದಿ ಹರಿದಾಡುತ್ತಿದೆ.
ನಟ ಅರ್ಬಾಜ್ ಖಾನ್ ಜತೆ ಮಲೈಕಾ ಅವರ ಮದುವೆ 1998ರಲ್ಲಿ ಆಗಿತ್ತು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ದಂಪತಿ 2017ರಲ್ಲಿ ಪ್ರತ್ಯೇಕವಾಗಿದ್ದಾರೆ. ಈ ನಡುವೆಯೇ ಅರ್ಜುನ್ ಕಪೂರ್ ಜತೆ ಡೇಟಿಂಗ್ ನಡೆಸುತ್ತಿದ್ದಾರೆ ಮಲೈಕಾ. ಡೇಟಿಂಗ್ ಮುಗಿದು ಈಗ ಮದುವೆಯ ಬಂಧನಕ್ಕೆ ಬೀಳಲಿದ್ದಾರೆ ಎನ್ನಲಾಗುತ್ತಿದೆ. ಅರ್ಜುನ್ ಕಪೂರ್ಗೆ ಇದು ಮೊದಲ ಮದುವೆ. ಯಾವುದೇ ಆಡಂಬರವಿಲ್ಲದೇ ಸರಳವಾಗಿ ಮದುವೆಯಾಗುವುದಾಗಿ ಜೋಡಿ ಹೇಳಿಕೊಂಡಿದೆ.
ಅಂದಹಾಗೆ ಮಲೈಕಾಗೆ ಈಗ 48 ವರ್ಷ ವಯಸ್ಸು. ಅರ್ಜುನ್ ಕಪೂರ್ಗೆ 36 ವರ್ಷ. ಇಬ್ಬರ ನಡುವೆ 12 ವರ್ಷ ವಯಸ್ಸಿನ ಅಂತರವಿದೆ. ಇದಾಗಲೇ ಚಿತ್ರರಂಗದ ಹಲವಾರು ಮಂದಿ ಈ ಟ್ರೆಂಡ್ ಶುರು ಮಾಡಿದ್ದಾರೆ. ಅವರ ಸಾಲಿನಲ್ಲಿ ಈ ಜೋಡಿಯೂ ಸೇರ್ಪಡೆಯಾಗಿದೆ. ವಯಸ್ಸು 48 ಆದರೂ ಮಲೈಕಾ ಇನ್ನೂ ಝೀರೋ ಫಿಗರ್ ಆಗಿದೆ ಇದ್ದಾರೆ. ಸದಾ ಸಾಧ್ಯವಾದಷ್ಟು ಚಿಕ್ಕ ದಿರಿಸಿನಲ್ಲಿಯೇ ಕಾಣಿಸಿಕೊಳ್ಳುವ ಈ ನಟಿ, ಡೇಟಿಂಗ್ನಲ್ಲಿ ಫೇಮಸ್. ವಯಸ್ಸಿನಲ್ಲಿ ಏನಿದೆ ಬಿಡಿ ಎನ್ನುತ್ತಿದ್ದಾರಂತೆ ಮಲೈಕಾ.