

ಉತ್ತರ: ನಿಮ್ಮ ತಂದೆ ತೀರಿಕೊಂಡಾಗ ಅವರು ಬಿಟ್ಟು ಹೋಗಿದ್ದ ಎಲ್ಲ ಸ್ಥಿರ ಮತ್ತು ಚರ ಆಸ್ತಿಯಲ್ಲಿ ತಾಯಿಗೆ ಮತ್ತು ಐವರೂ ಮಕ್ಕಳಿಗೆ ಸೇರಿ ತಲಾ ಆರರಲ್ಲಿ ಒಂದು ಭಾಗ ಇರುತ್ತದೆ. ನಿಮ್ಮ ತಾಯಿ ಕೆಲಸಕ್ಕೆ ಸೇರಿ ಸಂಪಾದಿಸಿದ ಆಸ್ತಿಯಲ್ಲಿ, ಹಣದಲ್ಲಿ ನಿಮಗೆ ಯಾರಿಗೂ ಅವರು ಬದುಕಿರುವವರೆಗೆ ಭಾಗ ಸಿಗುವುದಿಲ್ಲ.
ಅವರು ಬದುಕಿದ್ದಾಗ ಬೇಕಿದ್ದರೆ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಯಾರಿಗಾದರೂ ಕ್ರಯ, ದಾನ ಅಥವಾ ವಿಲ್ ಮಾಡಬಹುದು. ನೀವು ತಾಯಿಯ ಮನಸ್ಸನ್ನು ಒಲಿಸಿಕೊಂಡು ಅವರಿಂದ ಆಸ್ತಿ ಪಡೆಯುವುದು ಒಳ್ಳೆಯದು. ಕೋರ್ಟಿಗೆ ಹೋದರೆ ತಾಯಿಯ ಸಂಪಾದನೆಯ ಆಸ್ತಿಯಲ್ಲಿ ನಿಮಗೆ ಭಾಗ ಸಿಗುವುದಿಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/