More

    ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?

    ತಂದೆಯವರು ದಾನಪತ್ರದ ಮೂಲಕ ನೀಡಿರುವ ಮುತ್ತಜ್ಜಿ ಆಸ್ತಿಯಲ್ಲಿ ಅಣ್ಣನಿಗೂ ಪಾಲಿದೆಯೆ?ನಮ್ಮ ತಂದೆಯವರು ಅವರ ತಾಯಿಯ ತಾಯಿ,ಅಂದರೆ ಅವರ ಅಜ್ಜಿಯಿಂದ ಬಂದ ಆಸ್ತಿಯನ್ನು ನನಗೆ 2018 ರಲ್ಲಿ ದಾನಪತ್ರ ಮಾಡಿ ಕೊಟ್ಟರು.ಈಗ ನನಗೆ ತಂದೆ ತಾಯಿ ಯಾರು ಇಲ್ಲ. ಅಣ್ಣ ಅವನ ಹೆಂಡತಿಯಿಂದ ಬಂದ ಆಸ್ತಿ ನೋಡಿಕೊಂಡು ಹೆಂಡತಿ ಊರಲ್ಲಿ ಬದುಕುತ್ತಿದ್ದಾನೆ. ನನಗೆ ತಂದೆಯಿಂದ ಬಂದ ಆಸ್ತಿಯನ್ನು ಪರಬಾರೆ ಮಾಡಬಹುದಾ ಹೇಗೆ ತಿಳಿಸಿ..ನಾನು ಮಾರಾಟ ಮಾಡುವುದಕ್ಕೆ ಅಣ್ಣ ನನ್ನ ಮೇಲೆ ಕೇಸ್ ಹಾಕಿ ತಡೆಯುವ ಅಧಿಕಾರ ಇದೀಯ ಹೇಗೆ ದಯಮಾಡಿ ತಿಳಿಸಿ.

    ಉತ್ತರ: ನಿಮ್ಮ ತಂದೆಯಿಂದ ನೋಂದಾಯಿತ ದಾನ ಪತ್ರದಮೂಲಕ ನಿಮಗೆ ಬಂದ ಆಸ್ತಿ ನಿಮ್ಮ ವೈಯಕ್ತಿಕ ಮತ್ತು ಪ್ರತ್ಯೇಕ ಆಸ್ತಿ ಆಗುತ್ತದೆ. ಅದನ್ನು ನೀವು ಯಾರಿಗೆ ಬೇಕಾದರೂ, ಹೇಗೆ ಬೇಕಾದರೂ ಪರಭಾರೆ ಮಾಡಬಹುದು. ಅದನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ನಿಮ್ಮ ಅಣ್ಣ ಕೇಸು ಹಾಕಿದರೆ ಪ್ರಯೋಜನ ಆಗುವುದಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts