More

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?ನಮ್ಮ ಅಜ್ಜನ ಹೆಸರಿನಲ್ಲಿ ಎಂಟು ಎಕರೆ ಜಮೀನು ಇದ್ದು ನಮ್ಮ ಅಜ್ಜ ಅಜ್ಜಿ ತೀರಿಕೊಂಡಿದ್ದಾರೆ. ನನ್ನ ಅಜ್ಜನಿಗೆ ನಮ್ಮ ತಂದೆ ಒಬ್ಬನೇ ಮಗ. ಅವರ ಹೆಸರಿಗೆ ಖಾತೆ ಆಯಿತು. ನಮ್ಮ ತಂದೆ ತಾಯಿ ಇಬ್ಬರೂ ತೀರಿಕೊಂಡ ಮೇಲೆ ನನ್ನ ಹೆಸರಿಗೆ ಖಾತೆ ಆಗಿದೆ. ಬರಪರಿಹಾರದ ಹಣವೂ ನನ್ನ ಹೆಸರಿಗೇ ಬಂದಿದೆ. ನನಗೆ ಮೂರು ಜನ ತಂಗಿಯರು ಇದ್ದಾರೆ.
    ಅವರಿಗೂ ಆಸ್ತಿಯಲ್ಲಿ ಪಾಲು ಇದೆಯೇ? ದಾನ ಪತ್ರದ ಮೂಲಕ ಕೊಡಬಹುದೇ? ಅವರಿಗೆ ಮೋಸ ಮಾಡುವ ಉದ್ದೇಶ ನನಗೆ ಇಲ್ಲ. ಅವರಿಗೆ ತಲಾ ಒಂದು ಎಕರೆ ಕೊಡಬೇಕೆಂದಿದ್ದೇನೆ. ಅವರಿಗೆ ಎಷ್ಟು ಆಸ್ತಿ ಬರುತ್ತದೆ? ದಯವಿಟ್ಟು ತಿಳಿಸಿ.

    ಉತ್ತರ: ತಂಗಿಯರಿಗೆ ಭಾಗ ಕೊಡಬೇಕೆನ್ನುವ ನಿಮ್ಮ ಉದ್ದೇಶ ನಿಜವಾಗಿಯೂ ಪ್ರಶಂಸನೀಯ. ನಿಮ್ಮ ಅಜ್ಜನ ಆಸ್ತಿ ಅವರು ತೀರಿಕೊಂಡಾಗ ನಿಮ್ಮ ತಂದೆಗೆ ಬಂದಾಗ ಅದು ನಿಮ್ಮ ತಂದೆಯ ಪ್ರತ್ಯೇಕ ಆಸ್ತಿ (ಸಪರೇಟ್ ಪ್ರಾಪರ್ಟಿ ) ಆಗಿರುತ್ತದೆ. ಈ ಪ್ರತ್ಯೇಕ ಆಸ್ತಿಗೆ ಸ್ವಯಾರ್ಜಿತ ಆಸ್ತಿಯ ಎಲ್ಲ ಲಕ್ಷಣಗಳೂ ಇರುತ್ತವೆ. ಹೀಗಾಗಿ ನಿಮ್ಮ ತಂದೆ ತೀರಿಕೊಂಡ ಮೇಲೆ ಆ ಆಸ್ತಿ ನಿಮ್ಮ ಮತ್ತು ನಿಮ್ಮ ಸೋದರಿಯರ ಮಧ್ಯೆ ಸಮಭಾಗ ಆಗಬೇಕು. ಅಂದರೆ ತಲಾ ನಾಲ್ಕನೇ ಒಂದು ಭಾಗ ನಿಮ್ಮ ತಂದೆಯ ಎಲ್ಲ ಮಕ್ಕಳಿಗೂ ಸಿಗುತ್ತದೆ. ನಿಮ್ಮ ತಂಗಿಯರಿಗೆ ಎಂಟು ಎಕರೆಯಲ್ಲಿ ತಲಾ ಎರಡು ಎಕರೆ ಬರುತ್ತದೆ.

    ಅವರ ಜತೆ ನೀವು ಕೂತು ಮಾತಾಡಿ. ಅವರು ಒಪ್ಪಿಕೊಂಡರೆ ಅವರು ಒಂದು ಎಕರೆಯನ್ನೇ ಪಡೆದು ನಿಮಗೆ ಐದು ಎಕರೆ ಬಿಡಬಹುದು. ಈ ಆಸ್ತಿಯ ವಿಷಯವಾಗಿ ದಾನ ಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ ಈ ಆಸ್ತಿ ನಿಮ್ಮ ಒಬ್ಬರದಲ್ಲ. ನಿಮ್ಮ ತಂಗಿಯರಿಗೆ ಆಸ್ತಿಯಲ್ಲಿ ಅವರದೇ ಹಕ್ಕು ಇರುತ್ತದೆ. ಅವರ ಆಸ್ತಿಯನ್ನು ಅವರಿಗೇ ದಾನ ಮಾಡುವ ಹಕ್ಕು ನಿಮಗೆ ಇರುವುದಿಲ್ಲ. ನೀವೆಲ್ಲರೂ ಒಪ್ಪಿದರೆ ನೋಂದಾಯಿತ ವಿಭಾಗ ಪತ್ರ ಮಾಡಿಕೊಳ್ಳಬಹುದು. ಆಸ್ತಿಯಲ್ಲಿ ಸಮಭಾಗದ ಹಕ್ಕು ಇದ್ದರೂ, ಸಮಭಾಗವನ್ನೇ ಪಡೆಯಬೇಕೆಂದಿಲ್ಲ. ಸ್ವ ಇಚ್ಛೆಯಿಂದ ನಿಮ್ಮ ಸಹೋದರಿಯರು ಕಡಿಮೆ ಭಾಗವನ್ನೂ ಪಡೆಯಬಹುದು.

    ನನ್ನ ಸಹಿ ಇಲ್ಲದೇ ಅಣ್ಣ-ಅಮ್ಮ ಹೊಲ ಮಾರಿದ್ದಾರೆ; ಆಸ್ತಿ ಸಿಗಲು ನಾನೇನು ಮಾಡಬೇಕು?

    ದೊಡ್ಡಪ್ಪನಿಗೆ ಮಕ್ಕಳಿಲ್ಲ- ಅವರನ್ನು ನೋಡಿಕೊಂಡ ನಮಗೆ ಆಸ್ತಿ ಸಿಗುತ್ತಾ ಅಥವಾ ಸಾಕುಮಗನಿಗೆ ಹೋಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts