More

    ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..

    ನಾನು ಮಾನಸಿಕ ರೋಗಿ ಎಂದು ಸುಳ್ಳು ಹೇಳಿ ಪತಿ ವಿಚ್ಛೇದನ ಪಡೆಯುತ್ತಿದ್ದಾರೆ, ಪ್ಲೀಸ್​ ದಾರಿ ತೋರಿ..ನನಗೆ ಮದುವೆಯಾಗಿ 1 ವರ್ಷ 9 ತಿಂಗಳು ಆಗಿದೆ ಮಕ್ಕಳಿಲ್ಲ.ನನ್ನ ಗಂಡ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ನನ್ನ ಗಂಡನ ಮನೆಯವರ ಜೊತೆ ಜಗಳ ಆಗಿ 8 ತಿಂಗಳಿಂದ ನನ್ನ ಅಮ್ಮನ ಮನೆಯಲ್ಲಿ ಇದ್ದೇನೆ.ನನಗೆ ನನ್ನ ಗಂಡನ ಅಣ್ಣ ,ಅತ್ತಿಗೆ ಜೊತೆ ಇರಲು ಇಷ್ಟ ಇಲ್ಲ ನನ್ನ ಗಂಡ ಬೇರೆ ಇರಲು ಒಪ್ಪ್ಪುತ್ತಿಲ್ಲ. ಅವರ ಅಣ್ಣನ ಮಾತು ಕೇಳಿ ವಿಚ್ಚೇದನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ.

    ನಾನು ನನ್ನ ಗಂಡ ಮತ್ತು ಅತ್ತೆಯ ಜೊತೆ ಇರುತ್ತೇನೆ ಆದರೆ ನನ್ನ ಭಾವನ ಜೊತೆ ಒಂದೇ ಮನೆ ಯಲ್ಲಿ ಇರಲು ಇಷ್ಟ ಇಲ್ಲ.ಅವರು ತುಂಬಾ ಕಿರಿಕಿರಿ ಮಾಡುತ್ತಾರೆ. ಮಹಿಳಾ ಆಯೋಗ ಕ್ಕೂ ಹಾಜರಾಗುತ್ತಿಲ್ಲ.ಹಾಗೂ ಡಿವೋರ್ಸ್ ಗೆ ಹುಡುಗಿ ಮಾನಸಿಕ ರೋಗಿ ಎಂದು ಕಾರಣ ನೀಡಿದ್ದಾರೆ. ನನ್ನ ಮಾನಸಿಕ ಆರೋಗ್ಯ ಚೆನ್ನಾಗಿದೆ. ನಾನು ಸೂಕ್ಷ್ಮ ಮನಸ್ಸಿನ ಹುಡುಗಿ ಆಗಾಗಿ ಅವರು ಈ ರೀತಿ ಕಾರಣ ನೀಡಿದ್ದಾರೆ. ನನಗೆ ಡಿವೋರ್ಸ್ ತೆಗೆದುಕೊಳ್ಳಲು ಇಷ್ಟ ಇಲ್ಲ.ನಾನು ಯಾವುದೇ ಕೆಲಸಕ್ಕೂ ಹೋಗುತ್ತಿಲ್ಲ.ಅವರಾಗಿಯೇ ಡಿವೋರ್ಸ್ ನೀಡುತ್ತಿರುವುದರಿಂದ ನನಗೆ ಜೀವನಾಂಶ ‌ಸಿಗುತ್ತದೆಯೇ? ಮಾನಸಿಕ ರೋಗಿ ಎಂದು ಕಾರಣ ನೀಡಿರುವುದರಿಂದ ಕೋರ್ಟ್ ನಲ್ಲಿ ನನಗೆ ನ್ಯಾಯ ಸಿಗುತ್ತದೆಯೆ? ದಯವಿಟ್ಟು ಉತ್ತರಿಸಿ ಗೊಂದಲದಲ್ಲಿದ್ದೇನೆ.

    ಉತ್ತರ: ನೀವು ಹೆದರಬೇಕಾಗಿಲ್ಲ. ಯಾವುದೇ ಆಧಾರವಿಲ್ಲದೇ , ಸುಮ್ಮನೇ, ಮಾನಸಿಕ ರೋಗಿ ಎಂದು ಆರೋಪ ಹೊರಿಸಿ ವಿಚ್ಛೇದನ ಪಡೆಯುವಂತಿಲ್ಲ. ಮಾನಸಿಕ ಆರೋಗ್ಯ ಯಾವ ರೀತಿಯಲ್ಲಿ ಇದ್ದಾಗ ಮಾತ್ರ ಡೈವೋರ್ಸ್‌ ಪಡೆಯಬಹುದು ಎನ್ನುವುದನ್ನು ನ್ಯಾಯಾಲಯ ನಿರ್ಧರಿಸುತ್ತದೆ. ಸೂಕ್ಷ್ಮ ಮನಸ್ಸಿನ ನೀವು ನಿಮ್ಮ ಭಾವನೆಗಳನ್ನು ಹೊರಹಾಕುವ ರೀತಿಯಿಂದ ನಿಮ್ಮನ್ನು ಮಾನಸಿಕ ರೋಗಿ ಎಂದು ಕರೆಯಲು ಆಗುವುದಿಲ್ಲ. ನೀವು ಡೈವೋರ್ಸ್‌ ಗೆ ಒಪ್ಪಬೇಕಾಗಿಲ್ಲ. ನನಗೆ ಗಂಡನ ಜೊತೆ ಬಾಳುವೆ ಮಾಡಲು ಇಷ್ಟ ಇದೆ ಎಂದು ತಿಳಿಸಿ.
    ಯಾವ ಕಾರಣದಿಂದ ನೀವು ನಿಮ್ಮ ಭಾವನ ಜೊತೆ ಒಂದೇ ಮೆನಯಲ್ಲಿ ಇರಲು ಇಷ್ಟ ಪಡುತ್ತಿಲ್ಲ ಎನ್ನುವುದನ್ನೂ ತಿಳಿಸಿ. ನಿಮಗೆ ನಿಮ್ಮನ್ನು ನೀವು ಪೋಷಿಸಿಕೊಳ್ಳುವ ಚೈತನ್ಯ ಇಲ್ಲದಿದ್ದರೆ, ಕೆಲಸ ಇಲ್ಲದಿದ್ದರೆ, ನಿಮ್ಮ ಪತಿಯಿಂದ ಜೀವನಾಂಶವನ್ನೂ ಪಡೆಯಬಹುದು.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ   https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಅಜ್ಜನ ಆಸ್ತಿ ನನಗೆ ಸಿಕ್ಕಿದೆ, ತಂಗಿಯಂದಿರಿಗೂ ಇದರಲ್ಲಿ ಪಾಲು ಇದೆಯೆ?

    ಮಂಚದಲ್ಲೂ ಪತ್ನಿಗೆ ಫೋನ್​ ಬೇಕು, ಲೈಂಗಿಕ ಸುಖವೇ ಇಲ್ಲ- ಡಿವೋರ್ಸ್​ ಕೇಸ್​ ಹಾಕಬಹುದಾ?

    ನನ್ನನ್ನು ತವರಿಗೆ ದಬ್ಬಿದ್ದು ವಾಪಸ್‌ ಕರೆಸಿಕೊಳ್ಳುತ್ತಿಲ್ಲ- ಕೇಸ್ ಹಾಕದೇ ಪತಿಯನ್ನು ಸೇರುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts