

ಆನಂದ್ (ಗುಜರಾತ್): ಕಾರಿಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ 10 ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಗುಜರಾತ್‌ನ ಆನಂದ್ ಜಿಲ್ಲೆಯ ಇಂದ್ರನಾಜ್ ಗ್ರಾಮದ ಬಳಿ ನಡೆದಿದೆ.
ಆನಂದ್ ಜಿಲ್ಲೆಯ ತಾರಾಪುರದಿಂದ ಅಹಮದಾಬಾದ್ ಜಿಲ್ಲೆಯ ವಟಮನ್ ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿದೆ. ಕಾರು ಮತ್ತು ಟ್ರಕ್ ಮುಖಾಮುಖಿಯಾಗಿ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರು ವಾಟಾಮನ್ಗೆ ಹೋಗುತ್ತಿತ್ತು..ಟ್ರಕ್ ವಾಟಾಮನ್ ಕಡೆಯಿಂದ ಬರುತ್ತಿತ್ತು. ಎರಡೂ ವಾಹನಗಳ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ 10 ಮಂದಿ ಸ್ಥಳದಲ್ಲೇ ಮೃತಪಟ್ಟರು. ಮೃತದೇಹಗಳು ನಜ್ಜುಗುಜ್ಜಾಗಿವೆ. ಕಾರಿನ ಹೊರತೆಗೆಯಲು ಮತ್ತು ಮೃತರನ್ನು ಗುರುತಿಸುವ ಕೆಲಸ ನಡೆಯುತ್ತಿದೆ.
ಶವ ಹೊರತೆಗೆಯುವುದೇ ಸವಾಲಿನ ಕೆಲಸವಾಗಿತ್ತು. ಹಾಗೇ, ಮೃತರ ಗುರುತು ಪತ್ತೆಹಚ್ಚುವ ಕೆಲಸವೂ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.