ಮದ್ಯ ಖರೀದಿಗೆ ಮುನ್ನವೇ ಖುಷಿಯಲ್ಲಿ ಟೈಟ್‌! ಬಾಟ್ಲಿಗೆ ಪೂಜೆ ಮಾಡಿದ ಎಣ್ಣೆಭಕ್ತ- ಕುಳಿತಲ್ಲೇ ನಮಸ್ಕರಿಸಿದ್ರು ಪ್ರಿಯರು!

liquor
Published on

ಮಧುರೈ: ತಮಿಳುನಾಡಿನಲ್ಲಿ ಕರೊನಾ ಸೋಂಕಿನ ಪ್ರಮಾಣ ಅಲ್ಪ ಇಳಿಯುತ್ತಿದ್ದಂತೆಯೇ ಮದ್ಯದಂಗಡಿಗಳನ್ನು ತೆರೆಯಲಾಗಿದೆ. ಜೂನ್ 21ರವರೆಗೆ ಮತ್ತೆ ಲಾಕ್​ಡೌನ್ ವಿಸ್ತರಣೆ ಮಾಡಿದ್ದರೂ ಕೆಲವೊಂದು ಸಡಿಲಿಕೆ ಇದ್ದು, ಅದರಲ್ಲಿ ಮದ್ಯದಂಗಡಿ ತೆರೆಯುವುದೂ ಒಂದಾಗಿದೆ.

ಮದ್ಯವನ್ನು ಕಾಣದೇ ಕಂಗೆಟ್ಟು ಹೋಗಿದ್ದ ಎಣ್ಣೆಪ್ರಿಯರಿಗೆ ಇದು ಹೇಳಿಕೊಳ್ಳಲಾರದಷ್ಟು ಸಂತಸ ನೀಡಿದೆ. ಬೆಳಗ್ಗೆ ಮದ್ಯದಂಗಡಿಯೊಂದು ತೆರೆಯುತ್ತಿದ್ದಂತೆಯೇ ದೌಡಾಯಿಸಿ ಎಣ್ಣೆಪ್ರಿಯನೊಬ್ಬ, ಅಂಗಡಿ ಮುಂದೆ ಹೋಗಿ ದೀಪ ಬೆಳಗಿದ್ದಾನೆ. ನಂತರ ಮದ್ಯದ ಬಾಟಲಿ ತೆಗೆದುಕೊಂಡು ಆರತಿ ಬೆಳಗಿ ನಮಸ್ಕಾರ ಮಾಡಿದ್ದಾನೆ.

ಇದರ ವಿಡಿಯೋ ವೈರಲ್‌ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್‌ಗಳ ಸುರಿಮಳೆಯೇ ಸುರಿಯುತ್ತಿದೆ. ಮದ್ಯದಂಗಡಿಯನ್ನು ತೆರೆಯದೇ ಬೇಸರದಲ್ಲಿರುವ ಕೆಲ ಮದ್ಯಪ್ರಿಯರು ನಾವು ಇಲ್ಲಿಂದಲೇ ಅದಕ್ಕೆ ನಮಸ್ಕಾರ ಮಾಡಿರುವುದಾಗಿ ಕಮೆಂಟ್‌ ಹಾಕುತ್ತಿರುವುದು ವಿಶೇಷ. ಮಾತ್ರವಲ್ಲದೇ, ಬಹುತೇಕ ಮಂದಿ ಈ ವಿಡಿಯೋ ನೋಡಿ ಆನಂದ ಪಟ್ಟುಕೊಂಡಿದ್ದು, ನಮ್ಮ ರಾಜ್ಯದಲ್ಲಿಯೂ ಇಂಥ ಸೌಭಾಗ್ಯ ಯಾವಾಗ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net