ಅರವತ್ತೇ ಗಂಟೆಗಳಲ್ಲಿ 110 ಅಡಿ ಉದ್ದದ ಸೇತುವೆ ನಿರ್ಮಿಸಿ ದಾಖಲೆ ಮಾಡಿದ ಸೇನೆ

bridge
Published on

ನವದೆಹಲಿ: ಸೇನೆಯ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ಕೇವಲ 60 ಗಂಟೆಗಳಲ್ಲಿ ಸೇತುವೆ ನಿರ್ಮಿಸುವ ಮೂಲಕ ದಾಖಲೆ ಬರೆದಿದೆ.

ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಕೇಲಾ ಮೋರ್‌ನಲ್ಲಿ 110 ಅಡಿ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. ಇದಕ್ಕೆ ಕೇವಲ 60 ಗಂಟೆ ತೆಗೆದುಕೊಳ್ಳಲಾಗಿದೆ, ಇದೀಗ ದಾಖಲೆಯ ಪುಟ ಸೇರಿದೆ. ಈ ಸೇತುವೆ ನಿರ್ಮಾಣಕ್ಕೆ ಪ್ರೀ ಫ್ಯಾಬ್ರಿಕೇಟೆಡ್‌ ಉಕ್ಕಿನ ಫ‌ಲಕಗಳನ್ನು ಬಳಸಲಾಗಿದೆ.

ಜ.11ರಂದು ಇಲ್ಲಿದ್ದ ಸೇತುವೆಯು ಕುಸಿದು ಬಿದ್ದ ಕಾರಣ, ದೇಶದೊಂದಿಗಿನ ಕಣಿವೆಯ ಸಂಪರ್ಕ ಕಡಿತಗೊಂಡಿತ್ತು. ಈ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಸೇತುವೆ ನಿರ್ಮಿಸಲು ನಿರ್ಧರಿಸಲಾಯಿತು ಎಂದು ಬಿಆರ್‌ಒ ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಶನಿವಾರ ಮಧ್ಯಾಹ್ನ ಸಂಚಾರಾರ್ಥವಾಗಿ ವಾಹನಗಳನ್ನು ಓಡಿಲಾಗಿದ್ದು, ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಸಂಜೆಯಿಂದಲೇ ಈ ಬೈಲಿ ಬ್ರಿಡ್ಜ್ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net