ರಷ್ಯಾದ ಚಂದ್ರಯಾನ ವಿಫಲ; ತಾಂತ್ರಿಕ ದೋಷಕ್ಕೆ ಒಳಗಾಗಿ ಲೂನಾ-25 ಪತನ

Luna 25 (1)
Published on

ಮಾಸ್ಕೋ: ಭಾರತ ಚಂದ್ರಯಾನ-3 ಕೈಗೊಂಡ ಬೆನ್ನಿಗೇ ರಷ್ಯಾದ ಮೊದಲ ಚಂದ್ರನ ಕಾರ್ಯಾಚರಣೆ ಲೂನಾ-25 ಕೂಡ ಚಂದ್ರನತ್ತ ಯಾನ ಕೈಗೊಂಡಿತ್ತು. ಆದರೆ ಅದು ಇಂದು ತಾಂತ್ರಿಕ ದೋಷಕ್ಕೆ ಒಳಗಾಗಿದ್ದು, ಪತನಗೊಂಡಿದೆ.

ಲ್ಯಾಂಡಿಂಗ್ ಪೂರ್ವ ಕುಶಲತೆಯ ಸಮಯದಲ್ಲಿ ಸಂಭವಿಸಿದ ಘಟನೆಯ ನಂತರ ಅದು ಚಂದ್ರನ ಮೇಲೆ ಅಪ್ಪಳಿಸಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್​ ಭಾನುವಾರ ತಿಳಿಸಿದೆ. ಶನಿವಾರ ಮಧ್ಯಾಹ್ನ 2:57ಕ್ಕೆ (1157 GMT) ಲೂನಾ-25 ಜತೆಗಿನ ಸಂವಹನ ಕಳೆದುಹೋಯಿತು ಎಂದು ರಾಸ್​ಕಾಸ್ಮೋಸ್ ತಿಳಿಸಿದೆ.

ಪ್ರಾಥಮಿಕ ಸಂಶೋಧನೆಗಳ ಪ್ರಕಾರ, ಲ್ಯಾಂಡರ್ ಚಂದ್ರನ ಮೇಲ್ಮೈಗೆ ಘರ್ಷಣೆಯಾದ ನಂತರ ಅಸ್ತಿತ್ವದಲ್ಲಿಲ್ಲ ಎಂದು ರಾಸ್​​ಕಾಸ್ಮೋಸ್​ ತಿಳಿಸಿದೆ. ಕ್ರಾಫ್ಟ್ ಪತ್ತೆಹಚ್ಚಲು ಮತ್ತು ಅದರೊಂದಿಗೆ ಸಂಪರ್ಕ ಸಾಧಿಸಲು ನಿನ್ನೆ ಹಾಗೂ ಇಂದು ಕೈಗೊಂಡ ಕ್ರಮಗಳು ವಿಫಲವಾಗಿವೆ ಎಂದೂ ಅದು ಹೇಳಿದೆ.

ಇಸ್ರೊ ನೌಕೆ ಚಂದ್ರಯಾನ-3 ಜು.14ರಂದು ಉಡಾವಣೆಗೊಂಡಿದ್ದರೆ ರಾಸ್​ಕಾಸ್ಮೋಸ್​ನ ಲೂನಾ-25 ಬಹುತೇಕ ಒಂದು ತಿಂಗಳ ನಂತರ ಅಂದರೆ ಆ.11ರಂದು ಗಗನಕ್ಕೆ ನೆಗೆದಿತ್ತು. ಚಂದ್ರನ ದಕ್ಷಿಣ ಧ್ರುವ ತಲುಪುವುದು ಎರಡೂ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಗುರಿಯಾಗಿದೆ. ರಷ್ಯಾ ನೌಕೆ ಲೂನಾ ನಂತರ ಉಡಾವಣೆಗೊಂಡಿದ್ದರೂ ಭಾರತದ ಚಂದ್ರಯಾನ-3ಕ್ಕಿಂತ ಬೇಗನೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆ ಇತ್ತು. ಆದರೆ ಈಗ ಅದು ಪತನಗೊಳ್ಳುವ ಮೂಲಕ ವಿಫಲಗೊಂಡಿದೆ. ಲೂನಾ-25 ಕಳೆದ ಸುಮಾರು 50 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರ ಮಿಷನ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net