ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದ ವಿದ್ಯಾರ್ಥಿನಿ!

Student 3
Published on

ಕೋಲ್ಕತ: ವಿಶ್ವವಿದ್ಯಾಲಯ, ಕಾಲೇಜು ಎಂದಮೇಲೆ ಅಲ್ಲೊಂದಿಷ್ಟು ಶಿಸ್ತು-ನಿಯಮ ಇದ್ದೇ ಇರುತ್ತದೆ. ಆದರೆ ಇಲ್ಲೊಂದು ಕಡೆ ವಿದ್ಯಾರ್ಥಿನಿಯೊಬ್ಬಳು ವಿವಿ ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ನಮ್ಮ ಹಕ್ಕು ಎಂದು ವಾದಿಸಿದ್ದಾಳೆ.

ಕೋಲ್ಕತದ ಜಾಧವ್​ಪುರ್ ಯುನಿವರ್ಸಿಟಿಯ ವಿದ್ಯಾರ್ಥಿನಿಯೊಬ್ಬಳು ಇಂಥದ್ದೊಂದು ವಾದ ಮಾಡಿದ್ದಾಳೆ. ಕಾಲೇಜ್ ಕ್ಯಾಂಪಸ್ ಒಳಗೆ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಹಿನ್ನೆಲೆಯಲ್ಲಿ ಕ್ಯಾಂಪಸ್​ನ ಹಲವೆಡೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಆದರೆ ತಮ್ಮ ಪ್ರೈವೆಸಿಗೆ ಧಕ್ಕೆ ಬರುತ್ತದೆ ಎಂದು ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿವಿ ಕ್ಯಾಂಪಸ್​ನ ಹಲವೆಡೆ ಸಿಸಿಟಿವಿ ಅಳವಡಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿನಿಯೊಬ್ಬಳು, ಕಾಲೇಜು ನಮ್ಮ ಎರಡನೇ ಮನೆ, ಹೀಗಿರುವಾಗ ಇಲ್ಲಿ ಮದ್ಯಪಾನ-ಧೂಮಪಾನ ಮಾಡಿದರೆ ತಪ್ಪೇನು? ಎಂದು ಕೇಳಿದ್ದಾಳೆ. ಮಾತ್ರವಲ್ಲ, ಇವರ್ಯಾಕೆ ಇಷ್ಟೊಂದು ಸಿಸಿಟಿವಿ ಅಳವಡಿಸಬೇಕು, ನಮ್ಮ ಪ್ರೈವೆಸಿಗೆ ಧಕ್ಕೆ ಬರುತ್ತದೆ ಅದರಿಂದ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಲ್ಲದೆ, ಕ್ಯಾಂಪಸ್​ನಲ್ಲಿ ಮದ್ಯಪಾನ-ಧೂಮಪಾನ ಮಾಡುವುದು ನಮ್ಮ ಹಕ್ಕು ಎಂದೂ ವಾದಿಸಿದ್ದಾಳೆ. ಈಕೆ ಮಾತಾಡಿದ್ದ ವಿಡಿಯೋ ಈಗ ವೈರಲ್ ಆಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net