ಅತ್ತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ನಟಿ; ಕಾರಣದ ಕುರಿತು ಸುದೀರ್ಘ ಬರಹ!

Anasuya
Published on

ಬೆಂಗಳೂರು: ನಟ-ನಟಿಯರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬದುಕಿನ ಮಹತ್ವದ ಘಟನೆ, ಆಗುಹೋಗು, ಸಂತೋಷಗಳನ್ನು ಹಂಚಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬರು ನಟಿ ಗಳಗಳನೆ ಅತ್ತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಅದಕ್ಕೆ ಕಾರಣ ಏನು ಎಂಬುದರ ಕುರಿತು ಸುದೀರ್ಘ ಬರಹವನ್ನೂ ಪೋಸ್ಟ್ ಮಾಡಿದ್ದಾರೆ.

ತೆಲುಗು ಚಿತ್ರನಟಿ ಅನಸೂಯಾ ಭಾರದ್ವಜ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಕುರಿತು ಪೋಸ್ಟ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿನ ನಕಾರಾತ್ಮಕತೆ ಕುರಿತು ಅವರು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

'ಹಲೋ.. ನೀವೆಲ್ಲರೂ ಉತ್ತಮ ಆರೋಗ್ಯ ಮತ್ತು ಉತ್ತಮ ಮನೋಭಾವದಿಂದ ಇದ್ದೀರಿ ಎಂದು ಭಾವಿಸುತ್ತೇನೆ.. ನನ್ನ ಈ ಪೋಸ್ಟ್ ನೋಡಿದ ನೀವೆಲ್ಲರೂ ತುಂಬಾ ಗೊಂದಲದ ಮನಸ್ಥಿತಿಯಲ್ಲಿದ್ದೀರಿ ಎಂದು ನನಗೆ ತಿಳಿದಿದೆ.. ಸೋಷಿಯಲ್ ಮೀಡಿಯಾ ಪ್ಲ್ಯಾಟ್​ಫಾರ್ಮ್​ಗಳು.. ಆರಂಭದಲ್ಲಿ.. ಕನಿಷ್ಠ ನನಗೆ ತಿಳಿದಂತೆ.. ಸಂಪರ್ಕಗಳನ್ನು ಪ್ರಾರಂಭಿಸಲು ಪರಿಚಯಿಸಲಾಯಿತು.. ಪ್ರಪಂಚದಾದ್ಯಂತ ಇದನ್ನು ಉತ್ತಮ ಸ್ಥಳವನ್ನಾಗಿ ಮಾಡಲು.. ಪರಸ್ಪರರಿಗಾಗಿ ಇರಲು, ಮಾಹಿತಿಯುಕ್ತ ವಿಷಯಗಳನ್ನು ಹಂಚಿಕೊಳ್ಳಲು, ಪರಸ್ಪರರ ಜೀವನಶೈಲಿ ಮತ್ತು ಸಂಸ್ಕೃತಿಗಳನ್ನು ಅನುಭವಿಸಿ.. ಸಂತೋಷವನ್ನು ಹರಡಲು ಇದಿದ್ದರೂ ಅದರಲ್ಲಿ ಯಾವುದಾದರೂ ನಿಜವಾಗಿಯೂ ಇದೆಯೇ ಎಂದು ನನಗೆ ಇಂದು ಆಶ್ಚರ್ಯವಾಗುತ್ತಿದೆ.

ಇಲ್ಲಿ ಪೋಸ್ಟ್ ಮಾಡುವ ಎಲ್ಲವೂ ನನ್ನ ಜೀವನದ ಒಂದು ಭಾಗ.. ನೀವೂ ಹಾಗೆಯೇ ಇದ್ದೀರಿ.. ಆದ್ದರಿಂದ ನಾನು ಎಲ್ಲವನ್ನೂ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಅಲ್ಲದೆ ನನ್ನ ಜೀವನದ ಈ ಹಂತಗಳು ಹಾಗೆಯೇ.. ಅಲ್ಲಿ ನಾನು ಅಷ್ಟು ಬಲಶಾಲಿಯಲ್ಲ. . . ನಾನು ದುರ್ಬಲನಾಗಿದ್ದೇನೆ. ನನಗೂ ನೋವುಗಳಿವೆ, ಮನುಷ್ಯರೆಂದ ಮೇಲೆ ಇವೆಲ್ಲ ಸಹಜ ಎಂಬುದನ್ನು ನೀವು ತಿಳಿಯಬೇಕೆಂದು ನಾನು ಬಯಸುತ್ತೇನೆ.

ನಾನು ಬಲಶಾಲಿ ಆಗಬೇಕು ಎಂದು ಬಯಸುತ್ತಿದ್ದರೂ ನನ್ನ ದೌರ್ಬಲ್ಯವನ್ನು ಕೂಡ ಹಂಚಿಕೊಳ್ಳುತ್ತೇನೆ. ಆ ಮೂಲಕ ಇನ್ನಷ್ಟು ಗಟ್ಟಿಯಾಗಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ. ಚೆನ್ನಾಗಿ ಅತ್ತುಬಿಟ್ಟು ಮತ್ತೆ ಎದ್ದು ಒಂದು ಅಥವಾ ಎರಡು ದಿನಗಳ ನಂತರ ನಗುವಿನೊಂದಿಗೆ ಜಗತ್ತನ್ನು ಎದುರಿಸಬೇಕು' ಎಂದು ಆಕೆ ಅಳುವಿನ ಒಂದು ವಿಡಿಯೋ ಸಹಿತ ಇವೆಲ್ಲವನ್ನೂ ಹಂಚಿಕೊಂಡಿದ್ದಾರೆ.

'ಒಬ್ಬ ವ್ಯಕ್ತಿ ಕೆಟ್ಟ ದಿನಗಳನ್ನು ಎದುರಿಸುತ್ತಿರಬಹುದು. ಅಂಥವರ ಬಗ್ಗೆ ಸರಿಯಾದ ವಿಷಯ ಗೊತ್ತಿರದೆ, ಅಂಥವರನ್ನು ಭೇಟಿ ಆಗಿರದಿದ್ದರೂ ಅವರ ಬಗ್ಗೆ ಜನರಿಗೆ ಕೆಟ್ಟದ್ದನ್ನು ಹೇಳಬಾರದು ಎಂದು ನಾನು ಎಲ್ಲರಿಗೂ ಒತ್ತಾಯಿಸುತ್ತೇನೆ. ಒಬ್ಬ ವ್ಯಕ್ತಿ ಹೃದಯ ಮತ್ತು ಮನಸಿನಲ್ಲಿ ಎಷ್ಟು ನೊಂದಿರಬಹುದು ಊಹಿಸಿ. ಅವರು ಚೆನ್ನಾಗಿರಲಿ ಎಂದು ಪ್ರಾರ್ಥಿಸಿ. ನಾನೂ ಅದನ್ನು ಕಷ್ಟಪಟ್ಟು ಕಲಿಯುತ್ತಿದ್ದೇನೆ' ಎಂದಿರುವ ಅವರು, 'ಐದು ದಿನಗಳ ಹಿಂದೆ ಅತ್ತಿದ್ದ ವಿಡಿಯೋ ಇದು' ಎಂದೂ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net