More

    ಚಂದ್ರನ ದಕ್ಷಿಣ ಧ್ರುವ ಯಾನದಲ್ಲಿ ಭಾರತ-ರಷ್ಯಾ ಸ್ಪರ್ಧೆ: ಇಸ್ರೊ ನೌಕೆಗಿಂತ ತಿಂಗಳು ತಡವಾಗಿ ಉಡಾವಣೆ; 2 ದಿನ ಮೊದಲೇ ಲೂನಾ-25 ಲ್ಯಾಂಡಿಂಗ್ ಸಾಧ್ಯತೆ

    ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಉಡಾಯಿಸಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದು ಆಗಸ್ಟ್ 23ರಂದು ಚಂದ್ರನ ಮೇಲ್ಮೈ ಮೇಲೆ ಇಳಿಸುವ ಯೋಜನೆ ಹೊಂದಿದೆ. ಈ ನಡುವೆ, ರಷ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್​ಕಾಸ್ಮೋಸ್ ಕೂಡ ನೌಕೆಯೊಂದನ್ನು ಉಡಾಯಿಸಿದ್ದು ಚಂದ್ರನ ಮೇಲೆ ಇಳಿಸುವ ತವಕದಲ್ಲಿದೆ. ಹೀಗಾಗಿ, ಭೂಮಿಯ ಉಪಗ್ರಹ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವಲ್ಲಿ ಎರಡು ಬಾಹ್ಯಾಕಾಶ ನೌಕೆಗಳ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಂತಿದೆ. ಇಸ್ರೊ ನೌಕೆ ಚಂದ್ರಯಾನ-3 ಜುಲೈ 14ರಂದು ಉಡಾವಣೆಗೊಂಡಿದ್ದರೆ ರಾಸ್​ಕಾಸ್ಮೋಸ್​ನ ಲೂನಾ-25 ಬಹುತೇಕ ಒಂದು ತಿಂಗಳ ನಂತರ, ಆಗಸ್ಟ್ 11ರಂದು ಗಗನಕ್ಕೆ ನೆಗೆದಿದೆ. ಚಂದ್ರನ ದಕ್ಷಿಣ ಧ್ರುವ ತಲುಪುವುದು ಎರಡೂ ದೇಶಗಳ ಬಾಹ್ಯಾಕಾಶ ಸಂಸ್ಥೆಗಳ ಗುರಿಯಾಗಿದೆ. ರಷ್ಯಾ ನೌಕೆ ಲೂನಾ ನಂತರ ಉಡಾವಣೆಗೊಂಡಿದ್ದರೂ ಭಾರತದ ಚಂದ್ರಯಾನ-3ಕ್ಕಿಂತ ಬೇಗನೆ ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಲೂನಾ-25, ಕಳೆದ ಸುಮಾರು 50 ವರ್ಷಗಳಲ್ಲಿ ರಷ್ಯಾದ ಮೊದಲ ಚಂದ್ರ ಮಿಷನ್ ಆಗಿದೆ.

    ಇಸ್ರೊ ಅಭಿನಂದನೆ: ಲೂನಾ-25 ಯಶಸ್ವಿ ಉಡಾವಣೆಯನ್ನು ನೆರವೇರಿಸಿರುವ ರಾಸ್​ಕಾಸ್ಮೋಸ್​ಗೆ ಇಸ್ರೊ ಅಭಿನಂದನೆ ಸಲ್ಲಿಸಿದೆ. ‘ನಮ್ಮ ಬಾಹ್ಯಾಕಾಶ ಪಯಣಗಳಲ್ಲಿ ಇನ್ನೊಂದು ಸಮಾಗಮದ ಅವಕಾಶ ಹೊಂದಿರುವುದು ಅದ್ಭುತ ಸಂಗತಿಯಾಗಿದೆ’ ಎಂದು ಇಸ್ರೊ ತನ್ನ ಟ್ವೀಟ್​ನಲ್ಲಿ ಹೇಳಿದೆ.

    ಸವಾಲಿನ ಕೆಲಸ: ಚಂದ್ರಯಾನ-3 ಮತ್ತು ಲೂನಾ-25 ಇಳಿಯುವ ಸ್ಥಳ ಯಾವುದೆಂಬುದು ಬಹಳಷ್ಟು ಅಂಶಗಳ ಮೇಲೆ ಅವಲಂಬಿಸಿದೆ. ಸವಾಲಿನಿಂದ ಕೂಡಿರುವ ಚಂದಿರನ ದಕ್ಷಿಣ ಧ್ರುವದ ಅಂಗಳದಲ್ಲಿ ನೌಕೆಗಳನ್ನು ಇಳಿಸು ವುದು ಸುಲಭದ ಕೆಲಸವಲ್ಲ ಎನ್ನುವುದು ತಜ್ಞರ ಅಭಿಮತವಾಗಿದೆ.

    ಮಹತ್ವಾಕಾಂಕ್ಷೆ ಯೋಜನೆ: ಲೂನಾ-25 ಚಂದ್ರನ ಮೇಲೆ ಇಳಿಯುವುದಕ್ಕೆ ಸಂಬಂಧಿಸಿ ರಾಸ್​ಕಾಸ್ಮೋಸ್ ಮಹತ್ವಾಕಾಂಕ್ಷೆಯ ವೇಳಾಪಟ್ಟಿ ರೂಪಿಸಿದೆ. ಉಡಾವಣೆಯಾದ ಐದು ದಿನದಲ್ಲಿ ಚಂದ್ರನ ಕಕ್ಷೆ ತಲುಪುವುದು, ಅಲ್ಲಿಂದ ಮತ್ತೆ ಐದರಿಂದ ಏಳು ದಿನದಲ್ಲಿ ಚಂದ್ರನ ಮೇಲ್ಮೈ ಮೇಲೆ ಅದನ್ನು ಇಳಿಸುವುದು ರಷ್ಯಾದ ಯೋಜನೆಯಾಗಿದೆ. ಲೂನಾ ಆಗಸ್ಟ್ 16ರಂದು ಚಂದ್ರನನ್ನು ತಲುಪಿ ಕಕ್ಷೆ ಪ್ರವೇಶಿಸಿ 21ರ ವೇಳೆಗೆ ಮೇಲ್ಮೈ ಮೇಲೆ ಇಳಿಯಲಿದೆ ಎಂದು ನ್ಯೂಯಾರ್ಕ್ ಟೈಮ್್ಸ ವರದಿ ಮಾಡಿದೆ.

    ಯೋಜನೆಗಳೇನು?: ಚಂದ್ರನ ಮೇಲೆ ಕೇವಲ ಎರಡು ವಾರ ಅವಧಿಯ ಪ್ರಯೋಗ ನಡೆಸುವುದು ಚಂದ್ರಯಾನ-3ರ ಉದ್ದೇಶವಾಗಿದೆ. ಆದರೆ, ಲೂನಾ-25ರ ಗುರಿಯ ಮುಂದೆ ಇದು ತೀರಾ ಪೇಲವವೆನಿಸುತ್ತದೆ. ಲೂನಾವನ್ನು ಚಂದ್ರನ ಮೇಲೆ ಒಂದು ವರ್ಷ ಕಾಲ ಪ್ರಯೋಗದಲ್ಲಿ ತೊಡಗಿಸುವಂತೆ ರಾಸ್​ಕಾಸ್ಮೋಸ್ ಯೋಜನೆ ರೂಪಿಸಿದೆ. ಲೂನಾದ ತೂಕ 1.8 ಟನ್ ಆಗಿದ್ದು 31 ಕೆಜಿಯಷ್ಟು (68 ಪೌಂಡ್) ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ದಿದೆ. ಇ-ಲಾಂಚ್ ವೆಹಿಕಲ್ ಮಾರ್ಕ್-3 ಎಂ4 ರಾಕೆಟ್ ಮೂಲಕ ಚಂದ್ರಯಾನ-3 ಉಡಾವಣೆಗೊಂಡಿದ್ದರೆ ಲೂನಾ-25 ಉಡಾವಣೆಗೆ ಸೋಯುಜ್-2 ಫ್ರೆಗಾಟ್ ಬೂಸ್ಟರ್​ಅನ್ನು ಬಳಸಲಾಗಿತ್ತು. ಚಂದ್ರನ ದಕ್ಷಿಣ ಧ್ರುವದ ರೆಗಾಲಿತ್ (ಗಟ್ಟಿಗೊಂಡಿಲ್ಲದ ಘನಪದಾರ್ಥ) ಮತ್ತು ಪ್ಲಾಸ್ಮಾ ಹಾಗೂ ಧೂಳಿನ ಕಣಗಳ ವೀಕ್ಷಣೆ ಲೂನಾದ ಉದ್ದೇಶವಾಗಿದೆ.

    ಲೆಫ್ಟಿಗಳಿಗೆಂದೇ ವಿಶೇಷ ಹೆಲ್ಮೆಟ್​: ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಪ್ರಚಾರಕ್ಕೆ ಸಿಕ್ತು ‘ವೇಗ’

    ಹರ್​ ಘರ್​ ತಿರಂಗ; ಮತ್ತೆ ರಾಷ್ಟ್ರಧ್ವಜ ಹಾರಿಸಲು ಕರೆಕೊಟ್ಟ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts