ಮಸೀದಿಗಳಲ್ಲಿ ಧ್ವನಿವರ್ದಕ ಬಳಕೆಗೆ ಹೊಸ ರೂಲ್ಸ್; ತಪ್ಪಿದರೆ ದಂಡ ಗ್ಯಾರಂಟಿ

masjid
Published on

ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಧ್ವನಿವರ್ದಕ ಬಳಸುವುದಕ್ಕೆ ನಿಯಮಗಳನ್ನು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಪ್ರಕಟಿಸಿದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ದಕ ಬಳಸುವುದಕ್ಕೆ ಸಂಪೂರ್ಣ ನಿಷೇಧವಿರಲಿದೆ ಎಂದು ತಿಳಿಸಲಾಗಿದೆ.

ಮಸೀದಿಗಳಲ್ಲಿ ಆಜಾನ್​ ಮತ್ತು ಇತರ ಪ್ರಮುಖ ಪ್ರಕಟಣೆಗಳಿಗೆ ಮಾತ್ರವೇ ಧ್ವನಿವರ್ದಕ ಬಳಸಬೇಕು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ರವರೆಗೆ ಬಳಕೆಗೆ ಅವಕಾಶವಿಲ್ಲ. ಆಸ್ಪತ್ರೆ, ಶೈಕ್ಷಣಿಕ ಕೇಂದ್ರಗಳ ಸುತ್ತ ಮುತ್ತಲಿನ 100 ಮೀಟರ್​ ಜಾಗವನ್ನು ಸೈಲೆನ್ಸ್​ ಝೋನ್​ ಎಂದು ಕರೆಯಲಾಗಿದೆ. ಈ ಪ್ರದೇಶದಲ್ಲಿ ಧ್ವನಿವರ್ದಕ ಬಳಕೆಗೆ ಅವಕಾಶವಿಲ್ಲ ಎಂದು ಬೋರ್ಡ್​ ಪ್ರಕಟಣೆಯಲ್ಲಿ ತಿಳಿಸಿದೆ. ಒಂದು ವೇಳೆ ಈ ನಿಯಮಗಳನ್ನು ತಪ್ಪಿದಲ್ಲಿ ಅದಕ್ಕೆ ಸೂಕ್ತ ದಂಡವನ್ನು ವಿಧಿಸುವುದಾಗಿಯೂ ತಿಳಿಸಲಾಗಿದೆ.

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net