More

    ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?

    ಆಮೆಗೆ ಹಲ್ಲೇ ಇರಲ್ಲ! ಅದು ಊಟ ಮಾಡೋದು ಹೇಗೆ ಗೊತ್ತಾ?ಆಮೆಗಳು, ಡೈನೋಸಾರ್ ಹುಟ್ಟುವ ಮೊದಲೇ, ಅಂದರೆ ಅಂದಾಜು 22 ಕೋಟಿ ವರ್ಷಗಳ ಹಿಂದೆಯೇ ಈ ಭೂಮಿಯ ಮೇಲೆ ವಿಕಾಸಗೊಂಡಿದ್ದವು. ಎಲ್ಲ ರೀತಿಯ ಆಮೆಗಳು ಮೂಲವಾಗಿ ಸರೀಸೃಪಗಳು. ನೀರಿನಲ್ಲಿ ವಾಸಿಸುವ ಆಮೆಗಳು ಆರೇಳು ಗಂಟೆಗೊಮ್ಮೆನೀರಿನಿಂದ ಮೇಲೆ ಬಂದು ಉಸಿರಾಡುತ್ತವೆ. ಕೆಲವು ದೊಡ್ಡ ಆಮೆಗಳು ಹತ್ತು ಗಂಟೆಗೊಮ್ಮೆ ಉಸಿರಾಡುತ್ತವೆ.

    ಈ ಕಡಲಾಮೆಗಳು, ಗುಂಪು ಗುಂಪಾಗಿ ವಾಸಿಸುವ ಸಂಘಜೀವಿಯಲ್ಲ. ನೂರಾರು ಕಿ.ಮೀ. ಅಂತರದಲ್ಲಿ ಒಂಟಿಯಾಗಿಯೇ ವಾಸಿಸುತ್ತವೆ. ಆದರೆ ಮೊಟ್ಟೆ ಇಡಲು ಮಾತ್ರ ಸಾವಿರಾರು ಕಿ.ಮೀ ದೂರದಿಂದ ತಾನು ಹುಟ್ಟಿದ ಸಮುದ್ರದ ದಂಡೆಗೇ ಬರುತ್ತವೆ. 2017ರ ನವೆಂಬರ್ ಮೊದಲ ವಾರದಲ್ಲಿ, ಒಡಿಶಾ ರಾಜ್ಯದ ಕಡಲಿನಲ್ಲಿ ಒಂದು ಲಕ್ಷದ ಎಂಬತ್ತು ಸಾವಿರ ಕಡಲಾಮೆಗಳು ಒಂದೇ ದಿವಸ ಕೋಟಿಗಟ್ಟಲೆ ಮೊಟ್ಟೆ ಇಟ್ಟ ವಿಷಯ ಬಹಳ ಪ್ರಚಾರ ಪಡೆದಿತ್ತು. ಅಂತಹ ಸಂದರ್ಭದಲ್ಲಿ ಅನುಕೂಲತಮ ಧಾರಣ ಸಾಮರ್ಥ್ಯ (ಕ್ಯಾರೀಯಿಂಗ್ ಕೆಪಾಸಿಟಿ) ಏನಾಗಬಹುದು ಎಂದು ಯೋಚಿಸಬೇಕು.

    ದಾಖಲೆಗಳ ಪ್ರಕಾರ ಒಂದು ಆಮೆ ಮೆಕ್ಸಿಕೋದಿಂದ ಜಪಾನ್‌ವರೆಗೆ ಹನ್ನೆರಡು ಸಾವಿರ ಕಿ.ಮೀ. ದೂರದಿಂದ ವಲಸೆ ಬಂದ ಸನ್ನಿವೇಶವಿದೆ. ಇವುಗಳು ಪ್ರತಿದಿವಸ ಅವುಗಳ ತೂಕದ ಎರಡರಷ್ಟು ಊಟವನ್ನು ತಿನ್ನುತ್ತವೆ. ಊಟವನ್ನು ಹುಡುಕಿಕೊಂಡು ಕೆಲವೊಮ್ಮೆ ಒಂದು ಕಿ.ಮೀ. ಆಳದವರೆಗೆ ಹೋಗುತ್ತವೆ. ಇವುಗಳಿಗೆ ಹಲ್ಲುಗಳಿಲ್ಲ. ಆದ್ದರಿಂದ ಆಹಾರವನ್ನು ಅಗಿಯಲಾಗದೆ ನುಂಗುತ್ತವೆ. ಆದ್ದರಿಂದ ಹೆಚ್ಚಿನ ಪಕ್ಷ ಮೂಳೆಯಿಲ್ಲದ ಜಲ್ಲಿ ಮೀನು, ಏಡಿ, ಬಸವನಹುಳ, ಶೈವಲಗಳು ಮುಂತಾದವುಗಳು ಇವಕ್ಕೆ ಆಹಾರವಾಗುತ್ತವೆ. ಕೆಲವೊಮ್ಮೆ ನೀರಿನಲ್ಲಿ ಬಿದ್ದಿರುವ ಪ್ಲ್ಯಾಸ್ಟಿಕ್ ಮತ್ತು ಸಿಗರೇಟು ತುಣುಕನ್ನು ಜಲ್ಲಿ ಮೀನು ಎಂದುಕೊಂಡು ತಿಂದುಬಿಡುತ್ತವೆ, ಆದರೆ ಅವುಗಳು ಜಲಚರಗಳ ಹೊಟ್ಟೆಯಲ್ಲಿ ಕರಗುವುದಿಲ್ಲ. ಉನ್ನತ ಮೂಲಗಳ ಪ್ರಕಾರ ಒಂದು ವರ್ಷಕ್ಕೆ ಅಂದಾಜು 4.5 ಟ್ರಿಲಿಯನ್ ಸಿಗರೇಟ್ ತುಣುಕುಗಳು ಸಮುದ್ರವನ್ನು ತಲುಪುತ್ತಿವೆಯಂತೆ.

    ಕುಸ್ತಿಯಲ್ಲಿ ಸೋತು ಆತ್ಮಹತ್ಯೆಗೆ ಶರಣಾದ ಬಬಿತಾ ಫೋಗಟ್‌ ಸೋದರ ಸಂಬಂಧಿ

    ಆಕಾಶದಲ್ಲಿಯೇ ಹುಟ್ಟಿತು ಹೆಣ್ಣುಮಗು: ಬೆಂಗಳೂರಿನ ಯುವತಿಗೆ ಖರ್ಚಿಲ್ಲದೇ ನೆರವೇರಿತು ಹೆರಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts