ಕುಸ್ತಿಯಲ್ಲಿ ಸೋತು ಆತ್ಮಹತ್ಯೆಗೆ ಶರಣಾದ ಬಬಿತಾ ಫೋಗಟ್‌ ಸೋದರ ಸಂಬಂಧಿ

babitha
Published on

ಚಂಡೀಗಢ: ಖ್ಯಾತ ಕುಸ್ತಿಪಟು ಬಬಿತಾ ಫೋಗಟ್‌ ಅವರ ಕುಟುಂಬದಲ್ಲಿ ಒಂದು ನಡೆಯಬಾರದ ಘಟನೆ ನಡೆದಿದೆ. ಕುಸ್ತಿ ಆಟದಲ್ಲಿ ಸೋತೆನೆಂಬ ನಿರಾಶೆಯಿಂದಾಗಿ ಬಬಿತಾ ಅವರ ಸೋದರ ಸಂಬಂಧಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹರಿಯಾಣದ ಬಲಾಲಿ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ರಿತಿಕಾ ಆತ್ಮಹತ್ಯೆಗೆ ಶರಣಾದ ಯುವತಿ. ಆಕೆ ರಾಜಸ್ಥಾನದ ಭರತ್ಪುರದ ಲೋಹಗರ್​ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಉಪ ಜೂನಿಯರ್, ಕಿರಿಯ ಮಹಿಳೆಯರು ಮತ್ತು ಪುರುಷರ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದಳು. ಮಾರ್ಚ್​ 12ರಿಂದ 14ರವರೆಗೆ ಕುಸ್ತಿ ಪಂದ್ಯಾವಳಿ ನಡೆದಿತ್ತು. ಆದರೆ ಅಂತಿಮ ಪಂದ್ಯದಲ್ಲಿ ರಿತಿಕಾ ಕೇವಲ ಒಂದು ಅಂಕದಿಂದ ಸೋಲುಂಡಿದ್ದಾಳೆ.

ಸೋಲಿನ ಬಗ್ಗೆ ಅತಿಯಾಗಿ ಬೇಸರಗೊಂಡಿದ್ದ ರಿತಿಕಾ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ. ಮಾರ್ಚ್​ 15ರಂದು ರಾತ್ರಿ 11ರ ಸಮಯಕ್ಕೆ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.(ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net