

ನಾಗ್ಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸಿದ್ಧಾಂತವಾದಿ, ಆರ್ಎಸ್ಎಸ್ನ ಪ್ರಥಮ ವಕ್ತಾರರಾಗಿದ್ದ ಎಂ.ಜಿ. ವೈದ್ಯ (97) ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು.
ಕೆಲವು ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ಒಳಗಾಗಿದ್ದ ಇವರು, ಇತ್ತೀಚೆಗಷ್ಟೇ ಅದರಿಂದ ಮುಕ್ತರಾಗಿ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರ ಮತ್ತೆ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದ್ದರಿಂದ ಶನಿವಾರ ಮೃತಪಟ್ಟರು.
ಇವರ ನಿಧನಕ್ಕೆ ಆರ್ಎಸ್ಎಸ್ ಸೇರಿ ಇತರ ಕ್ಷೇತ್ರದ ಹಲವರು ದುಃಖ ವ್ಯಕ್ತಪಡಿಸಿದ್ದು, ಸಂತಾಪ ಸೂಚಿಸಿದ್ದಾರೆ. ಇವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಭಾನುವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)