VIDEO| ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!

traffic
Published on

ಟ್ರಾಫಿಕ್​ ಪೊಲೀಸರ ಲಂಚದ ಕರಾಮತ್ತು! ಹೇಗೆಲ್ಲ ದುಡ್ಡನ್ನ ಜೇಬಿಗಿಳಿಸ್ತಾರೆ ನೋಡಿ!ಮುಂಬೈ: ಟ್ರಾಫಿಕ್​ ಉಲ್ಲಂಘನೆ ಮಾಡಿದಾಗ ದಂಡ ಕಟ್ಟುವವರಿಗಿಂತ, ಆ ಪೊಲೀಸರಿಗೆ ದುಡ್ಡು ಕೊಟ್ಟು ಎಸ್ಕೇಪ್​ ಆಗುವವರೇ ಜಾಸ್ತಿ ಎನ್ನುವ ಮಾತಿದೆ. ಇದಕ್ಕೆ ಸಾಕ್ಷಿ ಎನ್ನುವಂತಹ ವಿಡಿಯೋ ಒಂದು ಇದೀಗ ಸಕತ್​ ವೈರಲ್​ ಆಗಿದೆ. ಮಹಿಳಾ ಟ್ರಾಫಿಕ್​ ಪೊಲೀಸ್​ ಒಬ್ಬರು, ಟ್ರಾಫಿಕ್​ ನಿಯಮ ಉಲ್ಲಂಘಿಸಿದ ಮಹಿಳೆಯ ಕೈಯಿಂದ ನೇರವಾಗಿ ತನ್ನ ಪಾಕೆಟ್​ಗೆ ಹಣ ಇಳಿಸಿಕೊಂಡಿರುವ ವಿಡಿಯೋ ನೋಡಿರುವ ಇದೀಗ ಆ ಪೊಲೀಸ್​ ಅಧಿಕಾರಿಗೆ ಛೀ, ಥೂ ಎನ್ನಲಾರಂಭಿಸಿದ್ದಾರೆ.

ಮಹಾರಾಷ್ಟ್ರದ ಪುಣೆಯ ಸಾಯಿ ಚೌಕ್​ನಲ್ಲಿ ಚಿತ್ರೀಕರಿಸಲಾಗಿದೆ ಎನ್ನುವ ವಿಡಿಯೋವೊಂದು ಇದೀಗ ಸೋಶಿಯಲ್​ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿದೆ. ಸ್ಕೂಟರ್​ನಲ್ಲಿ ಬರುತ್ತಿದ್ದ ಮಹಿಳೆಯರಿಬ್ಬರನ್ನು ಟ್ರಾಫಿಕ್​ ಪೊಲೀಸರು ಸೈಡಿನಲ್ಲಿ ನಿಲ್ಲಿಸಿದ್ದಾರೆ. ಮಹಿಳಾ ಪೊಲೀಸ್​ ಸಿಬ್ಬಂದಿಯು, ಗಾಡಿಯಲ್ಲಿದ್ದ ಮಹಿಳೆಯನ್ನು ಸೈಡಿಗೆ ಕರೆದು ಏನೋ ವಿಚಾರವನ್ನು ಗುಟ್ಟಾಗಿ ಹೇಳುತ್ತಾರೆ. ಅದಕ್ಕೆ ಸಮ್ಮತಿಸಿದಂತೆ ಮಾಡುವ ಮಹಿಳೆ, ದುಡ್ಡನ್ನು ತಂದು ಹಿಂದಿನಿಂದ ಮಹಿಳಾ ಅಧಿಕಾರಿಯ ಜೇಬಿಗೆ ಇರಿಸುತ್ತಾಳೆ. ನಂತರ ತನಗೇನೂ ಗೊತ್ತೇ ಇಲ್ಲ ಎನ್ನುವಂತೆ ಬೈಕ್​ ಹತ್ತಿ ಹೊರಟು ಹೋಗುತ್ತಾಳೆ. ಇತ್ತ ಜೇಬಿಗೆ ಬಿದ್ದ ದುಡ್ಡು ಭದ್ರವಾಗಿರಲಿ ಎಂದು ಮಹಿಳಾ ಅಧಿಕಾರಿ ಅದನ್ನು ಇನ್ನಷ್ಟು ಕೆಳಗಿಳಿಸಿಕೊಳ್ಳುತ್ತಾಳೆ.

ಟ್ರಾಫಿಕ್​ ಪೊಲೀಸರ ಈ ವಿಡಿಯೋ ಸಾಮಾಜಿಕ ಜಾಲತಾಣದ ತುಂಬೆಲ್ಲ ಹರಿದಾಡಲಾರಂಭಿಸಿದೆ. ಎಲ್ಲ ಪೊಲೀಸರದ್ದೂ ಇದೇ ಹಣೆಬರಹ ಎಂದು ಅನೇಕರು ಬೈಯಲಾರಂಭಿಸಿದ್ದಾರೆ. (ಏಜೆನ್ಸೀಸ್​)

ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net