ಪೊಲೀಸ್​ ಪೇದೆ ಮತ್ತು ಹೆಂಡತಿಯ ಕೊಲೆ! ಅಪ್ಪ ಅಮ್ಮ ಚೀರಿಕೊಳ್ಳುತ್ತಿದ್ದರೆ ಏನೂ ಗೊತ್ತಿಲ್ಲದವಳಂತೆ ಸುತ್ತಾಡಿದ ಮಗಳು!

police
Published on

ಇಂದೋರ್​: ಮಧ್ಯಪ್ರದೇಶದ ಇಂದೋರ್​ನಲ್ಲಿ ಪೊಲೀಸ್​ ಪೇದೆ ಮತ್ತು ಆತನ ಹೆಂಡತಿಯನ್ನು ಕೊಲೆ ಮಾಡಲಾಗಿದೆ. ಮನೆಯೊಳಗಿದ್ದ ಅಪ್ಪ ಅಮ್ಮನ ಮೇಲೆ ಯಾರೋ ಹಲ್ಲೆ ನಡೆಸುತ್ತಿದ್ದರೂ ಮಗಳು ಮಾತ್ರ ಮನೆ ಹೊರಗೆ ನೆಮ್ಮದಿಯಿಂದ ಅಡ್ಡಾಡಿದ್ದಳು ಎನ್ನಲಾಗಿದೆ.

ಜ್ಯೋತಿ ಪ್ರಸಾದ್​ ಶರ್ಮಾ (45) ಮತ್ತು ಆತನ ಹೆಂಡತಿ ನೀಲಂ (43) ಮೃತ ದುರ್ದೈವಿಗಳು. ಜ್ಯೋತಿ ಪ್ರಸಾದ್​ ಅವರನ್ನು ವಿಶೇಷ ಸಶಸ್ತ್ರ ಪಡೆ (ಎಸ್​ಎಎಫ್​)ನೊಂದಿಗೆ ನಿಯೋಜಿಸಲಾಗಿತ್ತು. ಯಾರೀ ದುಷ್ಕರ್ಮಿಗಳು ದಂಪತಿಗೆ ಹರಿತಾದ ವಸ್ತುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಯೊಳಗಿದ್ದ ದಂಪತಿ ನೋವಿನಿಂದ ನರಳಾಡುವಾಗ ಅವರ 17 ವರ್ಷದ ಮಗಳು ಮನೆ ಹೊರಗೆ ಅಡ್ಡಾಡುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪ್ರಾಪ್ತ ಮಗಳು ಮತ್ತು ಆಕೆಯ ಬಾಯ್​ ಫ್ರೆಂಡ್​ನನ್ನು ಶಂಕಿತರ ಪಟ್ಟಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net