More

    ವಿದ್ಯಾರ್ಥಿಗಳೇ ಹೊಸ ವರ್ಷಕ್ಕೆ ಶಾಲೆಗೆ ಹೋಗಲು ರೆಡಿಯಾಗಿ, ಬೇಸಿಗೆ ರಜೆ ಆಸೆ ಬಿಟ್ಬಿಡಿ!

    ಬೆಂಗಳೂರು: ಹೊಸ ವರ್ಷ 2021ರ ಜನವರಿ 1ರಿಂದ ವಿದ್ಯಾಗಮ ಪ್ರಾರಂಭ ಆಗಲಿದೆ. ಶಾಲೆ ಆವರಣದಲ್ಲಿ ವಾರಕ್ಕೆ ಮೂರುದಿನ ನಡೆಯುವ ವಿದ್ಯಾಗಮಕ್ಕೆ ಬರಲು ವಿದ್ಯಾರ್ಥಿಗಳು ಪೋಷಕರ ಒಪ್ಪಿಗೆ ಪತ್ರವನ್ನು ತರಬೇಕು ಎಂದು ಸಿಎಂ ಬಿ.ಎಸ್​.ಯಡಿಯೂರಪ್ಪ ಹೇಳಿದರು.

    ಹೊಸ ವರ್ಷದಿಂದ ಶಾಲೆ ಆರಂಭಿಸಲು ಶನಿವಾರ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರ ತೀರ್ಮಾನಿಸಿದ್ದು, 6-7-8-9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಮೂಲಕ ಪಾಠ ಮಾಡಲು ಸಜ್ಜಾಗಿದೆ.

    ಸಭೆ ಬಳಿಕ ಮಾತನಾಡಿದ ಸಚಿವ ಸುರೇಶ್ ಕುಮಾರ್, ಕರೊನಾ ಎರಡನೇ ಅಲೆ ಸಾಧ್ಯತೆ ‌ಕಾರಣ ಡಿಸೆಂಬರ್ ಅಂತ್ಯದವರೆಗೆ ಶಾಲೆ ಆರಂಭ ಬೇಡ ಎಂದು ತಾಂತ್ರಿಕ ಸಲಹಾ ಸಮಿತಿ ಮುಂಚೆ ಹೇಳಿತ್ತು. ಬೋರ್ಡ್ ಪರೀಕ್ಷೆ ಇರುವುದರಿಂದ ಎಸ್​ಎಸ್​ಎಲ್​ಸಿ ಮತ್ತು 12 ನೇ ತರಗತಿಗಳನ್ನು 2021ರ ಜನವರಿ 1ರಿಂದ ಪ್ರಾರಂಭಿಸಲಾಗುತ್ತದೆ. ಆದರೆ, ವಿದ್ಯಾರ್ಥಿಗಳು ಹಾಜರಾತಿ ಕಡ್ಡಾಯ ಇಲ್ಲ. ಹಾಗೇ ಜನವರಿ 1ರಿಂದ ವಿದ್ಯಾಗಮ ಕೂಡ ಪುನರಾರಂಭ ಆಗಲಿದೆ. ಶಾಲೆ ಆವರಣದಲ್ಲೇ ವಾರಕ್ಕೆ ಮೂರುದಿನ 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ನಡೆಯಲಿದೆ. ಖಾಸಗಿ ಶಾಲೆಗಳೂ ವಿದ್ಯಾಗಮ ಪ್ರಾರಂಭ ಮಾಡಬೇಕು. ಮಕ್ಕಳನ್ನು ತರಗತಿಗೆ ಕಳಿಸಲೇಬೇಕೆಂಬ ಒತ್ತಾಯವಿಲ್ಲ ಎಂದು ವಿವರಿಸಿದರು.

    ವಿದ್ಯಾಗಮ ಯೋಜನೆ ಬಗ್ಗೆ ಕೋರ್ಟ್ ಮಾಹಿತಿ ಕೇಳಿತ್ತು. ಇಲಾಖೆಯಿಂದ ಪೂರ್ಣ ವಿವರ ಕೊಟ್ಟಿದ್ದೇವೆ. ಕೋರ್ಟ್ ಅನುಮತಿ ಮೇರೆಗೆ ವಿದ್ಯಾಗಮ‌ ಆರಂಭಿಸಲಾಗುವುದು. ವಿದ್ಯಾಗಮಕ್ಕೆ ಮಕ್ಕಳನ್ನು ಕಳಿಸಲೇಬೇಕೆಂಬ ಒತ್ತಡ ಇಲ್ಲ. ಈ ಬಗ್ಗೆ ಪೋಷಕರೇ ನಿರ್ಧಾರ ಮಾಡಲಿ. ಯೂಟ್ಯೂಬ್, ಚಂದನ ಟಿವಿ ಅಥವಾ ಆನ್‌ಲೈನ್ ಮೂಲಕವೂ ಕಲಿಯಬಹುದು. ವಿದ್ಯಾಗಮ‌ ಯೋಜನೆಯಲ್ಲಿ ಬಿಸಿಯೂಟ ಮನೆಗೇ ರವಾನೆ ಆಗಲಿದೆ. ಪರಿಸ್ಥಿತಿ ಸುಧಾರಿಸಿದರೆ ಮೊದಲ ವರ್ಷದ ಪಿಯುಸಿ ವಿದ್ಯಾರ್ಥಿಗಳಿಗೂ ಕಾಲೇಜಿನಲ್ಲಿ ತರಗತಿ ಆರಂಭ ಆಗಲಿದೆ ಎಂದರು.

    ಇನ್ನು ಮಕ್ಕಳಿಗೆ ಕರೋನಾ ಟೆಸ್ಟ್ ಕಡ್ಡಾಯ ಅಲ್ಲ. ಸಿಮ್ಟಮ್ಸ್ ಇದ್ದರೆ ಟೆಸ್ಟ್ ಮಾಡಿಸಿಕೊಳ್ಳಬೇಕು. ಪ್ರತಿ ಶಾಲೆಯಲ್ಲಿ ಐಸೋಲೇಟಡ್ ರೂಂ ಇರಲಿದೆ ಎಂದು ಸಿಎಂ ಬಿಎಸ್​ವೈ ಹೇಳಿದರು.

    ಡಿ. 21ರಂದು ಆಗಸ ನೋಡಲು ಸಜ್ಜಾಗಿ: ಗೋಚರಿಸಲಿದೆ ಈ ಶತಮಾನದ ಕೌತುಕಮಯ ದೃಶ್ಯ

    ಬೈಕ್​ನಲ್ಲಿ ಕುಳಿತು ನಿದ್ರೆಗೆ ಜಾರಿದ ತಾಯಿ-ಮಕ್ಕಳು ತರಗೆಲೆಯಂತೆ ರಸ್ತೆಗೆ ಉರುಳಿದರು! ಬೆಚ್ಚಿಬೀಳಿಸುತ್ತೆ ಈ ದೃಶ್ಯ

    ಸೆಕ್ಸ್​ ಮಾಡುವಾಗ ಪ್ರಜ್ಞೆ ತಪ್ಪಿದಳು, ನಾನು ಕೊಲೆ ಮಾಡಿಲ್ಲ… ಎಂದು ಕಣ್ಣೀರಿಟ್ಟ ಆರೋಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts