ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್

it
Published on

ನವದೆಹಲಿ : ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು ಸಾವಿರಾರು ಜನರು ವೆಬ್​ಸೈಟ್​ ತೊಂದರೆಗಳ ಮಧ್ಯೆ ರಿಟರ್ನ್​ ಫೈಲ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಈ ಸಮಯದಲ್ಲಿ ತೆರಿಗೆ ಇಲಾಖೆಯು ನಿಯಮಿತವಾಗಿ ರಿಟರ್ನ್​ ಸಲ್ಲಿಸಿರುವ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ.

2020 ರ ಏಪ್ರಿಲ್ 1 ನೇ ತಾರೀಕಿನಿಂದ 2021 ರ ಮಾರ್ಚ್ 29 ರ ನಡುವೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್​ ಟ್ಯಾಕ್ಸಸ್, ಒಟ್ಟು 2,24,829 ಕೋಟಿ ರೂಪಾಯಿಗಳ ಟ್ಯಾಕ್ಸ್ ರೀಫಂಡ್ ಮಾಡಿದೆಯಂತೆ. ಕಳೆದ ವರ್ಷಗಳಲ್ಲಿ ತೆರಿಗೆ ವಿನಾಯಿತಿಯ ಅರ್ಹತೆ ಪಡೆದಿರುವ 2.37 ಕೋಟಿ ತೆರಿಗೆದಾರರಿಗೆ ರೀಫಂಡ್ ನೀಡಲಾಗಿದೆ ಎಂದು ಇಲಾಖೆ ಟ್ವೀಟ್ ಮಾಡಿದೆ.

ಮುಖ್ಯವಾಗಿ ಟಿಡಿಎಸ್​ನಲ್ಲಿ ಕಡಿತವಾಗಿರುವ ಟ್ಯಾಕ್ಸ್​ ಮೊತ್ತವನ್ನು, ವಿನಾಯಿತಿಗೆ ಅರ್ಹರಾದ 2,33,78,418 ವೈಯಕ್ತಿಕ ಪಾವತಿದಾರರಿಗೆ 85,012 ಕೋಟಿ ರೂಪಾಯಿ ಆದಾಯ ತೆರಿಗೆ ರೀಫಂಡ್ ಮಾಡಲಾಗಿದೆ. ಮತ್ತು 1,39,817 ಕೋಟಿ ರೂಪಾಯಿ ಕಾರ್ಪೊರೇಟ್ ಟ್ಯಾಕ್ಸ್ಅನ್ನು 2,85,438 ಪ್ರಕರಣಗಳಲ್ಲಿ ರೀಫಂಡ್ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

ರೀಫಂಡ್​ ಸ್ಟೇಟಸ್ : ಅರ್ಹತೆ ಹೊಂದಿದ್ದೂ ಇನ್ನೂ ರೀಫಂಡ್ ಸಿಗದ ತೆರಿಗೆ ಪಾವತಿದಾರರು ತಮಗೆ ರೀಫಂಡ್ ಆಗಿದೆಯಾ ಎಂದು ಪರಿಶೀಲಿಸಲು ನೇರ ಲಿಂಕ್​ ಆದ tin.tin.nsdl.com/oltas/refund-status-pan.html ಗೆ ಭೇಟಿ ನೀಡಬಹುದು. ಟ್ಯಾಕ್ಸ್ ರೀಫಂಡ್ಅನ್ನು ರೀಫಂಡ್ ಬ್ಯಾಂಕರ್​ಗೆ ಕಳುಹಿಸಿದ 10 ದಿನಗಳ ನಂತರ ಈ ಬಗ್ಗೆ ಮಾಹಿತಿ ದೊರಕಲಿದೆ. ಪಾನ್ ಸಂಖ್ಯೆ ಮತ್ತು ಅಸೆಸ್​​ಮೆಂಟ್ ಇಯರ್​ಗಳ ಮಾಹಿತಿ ತುಂಬಿ ರೀಫಂಡ್ ಸ್ಟೇಟಸ್ ಅರಿಯಬಹುದಾಗಿದೆ. ಆದಾಗ್ಯೂ ರೀಫಂಡ್ ಆಗಿರದಿದ್ದಲ್ಲಿ ಇಲಾಖೆಯ ಅಧಿಕೃತ ವೆಬ್​ಸೈಟ್ ಮೂಲಕ ದೂರು ಸಲ್ಲಿಸಬಹುದಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net