ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

youth
Published on

ಪುಣೆ : ಇಡೀ ಜಗತ್ತಿನ ಜನಜೀವನವನ್ನು ಅಲ್ಲೋಕಲ್ಲೋಲ ಮಾಡಿರುವ ಕರೊನಾದಿಂದಾಗಿ ಆಗಿರುವ ಆರ್ಥಿಕ ಸಂಕಷ್ಟಗಳು ನೂರಾರು. ಈ ಸಮಸ್ಯೆಗಳಲ್ಲಿ ಕರೊನಾದಿಂದಾಗಿ ವಿಧಿಸಲಾದ ಲಾಕ್​ಡೌನ್​ ಸಮಯದಲ್ಲಿ ಜನರು ಉದ್ಯೋಗ ಕಳೆದುಕೊಂಡಿರುವುದೂ ಒಂದು. ಇಂಥ ಪರಿಸ್ಥಿತಿಯನ್ನು ಎದುರಿಸಲಾರದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ತನ್ನ ಮನೆಯಲ್ಲೇ ಸಾವಿಗೆ ಶರಣಾಗಿರುವ ಯುವ ಇಂಜಿನಿಯರ್​ನ ಹೆಸರು ಋಷಿಕೇಶ್ ಮಾರುತಿ ಉಮಪ್. 29 ವರ್ಷ ವಯಸ್ಸಿನ ಉಮಪ್ ತನ್ನ ರೂಮಿನೊಳಗೆ ಮರಣ ಹೊಂದಿರುವುದನ್ನು ಆತನ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.

ತನಿಖೆ ನಡೆಸಿದ ಪೊಲೀಸರು ಕಳೆದ ವರ್ಷದ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಉಮಪ್ ತನ್ನ ಕೆಲಸ ಕಳೆದುಕೊಂಡಿದ್ದ. ಈ ಬಗ್ಗೆ ತೀವ್ರ ಖಿನ್ನತೆಯನ್ನು ಎದುರಿಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net