ರೀ-ರಿಲೀಸ್​ಗೆ ಸಜ್ಜಾಯ್ತು ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್'; ಇಲ್ಲಿದೆ ನೋಡಿ ಮಾಹಿತಿ ​

WhatsApp Image 2024-05-07 at 9.33.37 AM
Published on

ಆಂಧ್ರಪ್ರದೇಶ: ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ ರಾಜಮೌಳಿ ನಿರ್ದೇಶನದ 'ಆರ್​ಆರ್​ಆರ್' ಸಿನಿಮಾ, ಕೇವಲ ಬಾಕ್ಸ್​ ಆಫೀಸ್​ನಲ್ಲಿ​ ಮಾತ್ರ ದಾಖಲೆ ಸೃಷ್ಟಿಸದೆ, ಅಪಾರ ಜನಮನ್ನಣೆಯನ್ನು ಗಳಿಸಿತು. ಈ ಚಿತ್ರದ 'ನಾಟು...ನಾಟು' ಹಾಡಿಗೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿತು. ಭಾರತೀಯ ಸಿನಿಮಾದಲ್ಲಿ ದೊಡ್ಡ ಮಟ್ಟದ ಯಶಸ್ಸು ಕಂಡ ರಾಜಮೌಳಿ ಸಿನಿಮಾ, ಇದೀಗ ಮತ್ತೊಮ್ಮೆ ಥಿಯೇಟರ್​ಗಳಲ್ಲಿ ರಿಲೀಸ್ ಕಾಣುವ ಮೂಲಕ ಚಿತ್ರರಸಿಕರ ಕೌತುಕ ಹೆಚ್ಚಿಸಿದೆ.

ತೆಲುಗು ನಟರಾದ ರಾಮ್​ಚರಣ್ ಹಾಗೂ ಜೂ. ಎನ್​ಟಿಆರ್​ ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಈ ಸಿನಿಮಾ ಇದೀಗ ರೀ-ರಿಲೀಸ್ ಆಗುವ ಮೂಲಕ ಮತ್ತೊಮ್ಮೆ ಟಾಲಿವುಡ್​ನಲ್ಲಿ ಸದ್ದು ಮಾಡುತ್ತಿದೆ. ಹಿಂದಿ ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿರುವ 'ಆರ್​ಆರ್​ಆರ್'​, 3ಡಿ ಮತ್ತು 2ಡಿ ಫಾರ್ಮೆಟ್​ನಲ್ಲಿ ರಿಲೀಸ್ ಆಗಲು ಸಜ್ಜಾಗಿದೆ.

3ಡಿ ಮತ್ತು 2ಡಿ ಫಾರ್ಮೆಟ್​ನಲ್ಲಿ ಮೂಡಿಬರಲಿರುವ ಆರ್​ಆರ್​ಆರ್​ ಸಿನಿಮಾ, ಇದೇ ಮೇ.10ರಂದು ಆಯ್ಕೆ ಮಾಡಲಾದ ಚಿತ್ರಮಂದಿರಗಳಲ್ಲಿ ಮಾತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ. ಚಿತ್ರದಲ್ಲಿ ಜೂ. ಎನ್​ಟಿಆರ್​, ರಾಮ್​ಚರಣ್, ಅಜಯ್​ ದೇವಗನ್​, ಆಲಿಯಾ ಭಟ್​, ಸಮುದ್ರಕನಿ, ಆಲಿವಿಯಾ ಮ್ಯಾರಿಸ್​, ಶ್ರೀಯಾ ಶರಣ್ ಮುಂತಾದವರ ತಾರಾಗಣವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net