ಕ್ಯಾಶ್​ ಮ್ಯಾನೇಜ್​ಮೆಂಟ್​ ಸರ್ವೀಸ್​ ಕಚೇರಿಗೆ ನುಗ್ಗಿ 7 ಕೋಟಿ ರೂ. ದೋಚಿದ ಖದೀಮರು!

punjab police
Published on

ಲುಧಿಯಾನ: ಕ್ಯಾಶ್​ ಮ್ಯಾನೇಜ್​ಮೆಂಟ್​ ಸರ್ವೀಸ್​(CMS) ಕಚೇರಿಯಿಂದ ಕಳ್ಳರ ಗುಂಪೊಂದು 7 ಕೋಟಿ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಪಂಜಾಬ್​ನ ಲುಧಿಯಾನದಲ್ಲಿ ನಡೆದಿದೆ.

ಲುಧಿಯಾನದ ನ್ಯೂ ರಾಜ್​ಗುರು ನಗರದಲ್ಲಿರುವ ಕಚೇರಿಗೆ ಶನಿವಾರ ಮಧ್ಯರಾತ್ರಿ 1:30ರ ಸುಮಾರಿಗೆ ಶಸ್ತ್ರಸಜ್ಜಿತವಾಗಿ ಬಂದಿದ್ದ 10 ಮಂದಿ ಕಳ್ಳರು ಅಲ್ಲಿನ ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಣ ದೋಚಿ ಪರಾರಿಯಾಗಿದ್ದಾರೆ.

ಬೇಜವಾಬ್ದಾರಿತನ

ಘಟನೆ ಕುರಿತು ಪ್ರತಿಕ್ರಿಯಿಸಿರುವ ಲುಧಿಯಾನ ನಗರ ಪೊಲೀಸ್​ ಆಯುಕ್ತರಾದ ಮಂದೀಪ್​ ಸಿಂಗ್​ ಸಿಧು ಘಟನೆಯೂ ತಡರಾತ್ರಿ 1:30ರ ಸುಮಾರಿಗೆ ಘಟನೆ ನಡೆದಿದ್ದು, ಆರೋಪಿಗಳು ಕರತ್ಯಕ್ಕೆ ಬಳಸಿದ್ದ ಮುಲ್ಲಾನ್​ಪುರ ಢಾಖಾ ಬಳಿ ಪತ್ತೆಯಾಗಿದ್ದ ವಾಹನದಲ್ಲಿ ಎರಡು ಶಸ್ತ್ರಾಸ್ತ್ರಗಳು ಸಹ ದೊರೆತಿವೆ.

CMS Office
ಘಟನೆ ನಡೆದ ಸ್ಥಳ

ಕಂಪನಿಯ ಬೇಜವಾಬ್ದಾರಿತನದ ಬಗ್ಗೆ ಕಿಡಿಕಾರಿದ ಮಂದೀಪ್​ ಸಿಂಗ್​ ಹಣವನ್ನು ಕರೆನ್ಸಿ ಚೆಸ್ಟ್​ನಲ್ಲಿ ಇಡುವ ಬದಲು ಹೊರಗೆ ಇಡಲಾಗಿದೆ. ಕಳ್ಳರು ಸಿಸಿಟಿವಿಯ ಡಿವಿಆರ್​ಗಳನ್ನು ಸಹ ದೋಚಿದ್ದಾರೆ. ದರೋಡೆ ನಡೆದಾಗ ಕಂಪನಿಗೆ ಸೇರಿದ ಸುಮಾರು 16ಕ್ಕೂ ಹೆಚ್ಚು ವಾಹನಗಳು ಕಾಂಪೌಂಡ್​ನಲ್ಲಿ ನಿಂತಿದ್ದವು.

ಸೆಕ್ಯೂರಿಟಿ ಗಾರ್ಡ್​ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು ಪ್ರಧೇಶದ ಸುತ್ತ ಇರುವ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಲಾಗುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಲುಧಿಯಾನ ನಗರ ಪೊಲೀಸ್​ ಆಯುಕ್ತ ಮಂದೀಪ್​ ಸಿಂಗ್​ ಸಿಧು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net