ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆ; ನಾಮಪತ್ರ ಸಲ್ಲಿಸುವ ವೇಳೆ ಘರ್ಷಣೆ, ಕೈ ನಾಯಕನ ಹತ್ಯೆ

Violence
Published on

ಕೊಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಜುಲೈ 8ರಂದು ನಡೆಯಲಿರುವ ಪಂಚಾಯತ್​ ಚುನಾವಣೆ ತೀವ್ರ ಕಾವು ಪಡೆದಿದ್ದು, ನಾಮಪತ್ರ ಸಲ್ಲಿಸುವ ಮೊದಲ ದಿನವೇ ಹಿಂಸಾಚಾರ ನಡೆದಿದೆ.

ಹಲವಾರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಆಗಮಿಸಿದ ವೇಳೆ ಕೆಲವೆಡೆ ಘರ್ಷಣೆ ಉಂಟಾದ ಕಾರಣ BDO ಕಚೇರಿಗಳಿಗೆ ಘೇರಾವ್​ ಹಾಕಿದ ಪ್ರಸಂಗವು ನಡೆದಿದೆ.

ಮುರ್ಷಿದಾಬಾದ್​ ಜಿಲ್ಲೆಯಲ್ಲಿ ಟಿಎಂಸಿ, ಸಿಪಿಎಂ, ಕಾಂಗ್ರೆಸ್​ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿದ್ದು, ಡೊಮ್​ಕಲ್​ನಲ್ಲಿ ತೃಣಮೂಲ ಪಕ್ಷದ ಮುಖಂಡರ ಮೇಲೆ ಹಲ್ಲೆ ನಡೆದಿದೆ. ಟಿಎಂಸಿ ಕಾರ್ಯಕರ್ತರ ಮೇಲೆ ಹಲ್ಲೆ ಬೆನ್ನಲ್ಲೇ ಸ್ಥಳೀಯ ಕಾಂಗ್ರೆಸ್​ ಮುಖಂಡ ಫೂಲ್​ಚಂದ್​ ಶೇಖ್(45) ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

Violence

ಫೂಲ್​ಚಂದ್ ಅವರ ಹತ್ಯೆ ಹಿಂದೆ ಟಿಎಂಸಿಯ ಕೈವಾಡ ಇದೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಪ್ರಕರಣ ಸಂಬಂಧ ಸ್ಥಳೀಯ ತೃಣಮೂಲ ಪಕ್ಷದ ಮುಖಂಡ ಬಶೀರ್​ ಮೊಲ್ಲಾ ಎಂಬಾತನನ್ನು ಬಂಧಿಸಿದ್ದು, ಆತನ ಬಳಿ ಇದ್ದ ಗನ್​ಅನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.

ಕಾಂಗ್ರೆಸ್​, ಸಿಪಿಎಂ ಪಕ್ಷದ ಕಾರ್ಯಕರ್ತರು ನಾಮಪತ್ರ ಸಲ್ಲಿಸಲು ಜಂಟಿಯಾಗಿ ಆಗಮಿಸಿದ ವೇಳೆ ಟಿಎಂಸಿ ಕಾರ್ಯಕರ್ತರ ಜೊತೆ ವಾಗ್ವಾದ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ರಸ್ತೆ ಬದಿ ನಿಂತಿದ್ದ ವಾಹನಗಳು ಜಖಂಗೊಂಡಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net