ಮನೋಜ್ ತಿವಾರಿ ಪುತ್ರಿ ಬಿಜೆಪಿ ಸೇರ್ಪಡೆ! ಪಕ್ಷ ಸೇರುವ ಉದ್ದೇಶ ತಿಳಿಸಿದ ರಿಹಿತಿ

WhatsApp Image 2024-05-05 at 9.39.34 PM
Published on

ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಅವರ ಪುತ್ರಿ ರಿಹಿತಿ ತಿವಾರಿ ಇದೀಗ ಕಮಲ ಸೇರ್ಪಡೆಯಾಗಿದ್ದು, ತನ್ನನ್ನು ಪಕ್ಷಕ್ಕೆ ಆಯ್ಕೆ ಮಾಡಿಕೊಂಡ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಜೆ.ಪಿ. ನಡ್ಡಾ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಭಗವಂತನ ಪ್ಲ್ಯಾನ್ ಏನಿತ್ತು ಎಂಬುದು ಈಗ ತಿಳಿಯುತ್ತಿದೆ ಎಂದು ರಿಹಿತಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

"ಈ ಹಿಂದೆ ನಾನು ಎನ್​ಜಿಓದಲ್ಲಿ ಕೆಲಸ ಮಾಡುತ್ತಿದ್ದೆ, ಮೂಲತಃ ನಾನೊಬ್ಬಳು ಗಾಯಕಿ ಹಾಗೂ ಸಾಹಿತಿ. ಜೀವನದಲ್ಲಿ ಸಮಾಜ ಸೇವೆ ಮಾಡಬೇಕು ಎಂಬ ಆಸೆಯನ್ನು ಹೊತ್ತಿದ್ದೆ. ಆದರೆ, ಅದು ಈ ರೀತಿ ಈಡೇರುತ್ತದೆ ಎಂದು ಊಹಿಸಿರಲಿಲ್ಲ. ದೇವರ ಪ್ಲ್ಯಾನ್ ಏನಿತ್ತು ಎಂಬುದರ ಅರಿವಿಲ್ಲದ ನನಗೆ, 10-15 ವರ್ಷಗಳ ಬಳಿಕ ಈ ಮಹತ್ವದ ಬದಲಾವಣೆ ನಡೆಯುತ್ತದೆ ಎಂಬುದು ಆತನ ಲೆಕ್ಕಾಚಾರವಾಗಿತ್ತು ಎಂದು ಈಗ ಗೊತ್ತಾಯಿತು" ಎಂದಿದ್ದಾರೆ.

"ನಿಜಕ್ಕೂ ಈ ವಿಷಯ ಕೇಳಿ ನನಗೆ ಶಾಕ್ ಆಗಿದೆ. ನನ್ನಲ್ಲಿ ಯಾವುದೋ ವಿಷಯವನ್ನು ಗಮನಿಸಿ, ಪಕ್ಷಕ್ಕೆ ಆಯ್ಕೆ ಮಾಡಿಕೊಂಡ ಜೆ.ಪಿ. ನಡ್ಡಾ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನನ್ನ ಮೇಲಿಟ್ಟಿರುವ ಭರವಸೆಯನ್ನು ಖಂಡಿತ ನಿರಾಸೆ ಮಾಡುವುದಿಲ್ಲ" ಎಂದು ರಿಹಿತಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net