ಖ್ಯಾತ ಕ್ಯಾನ್ಸರ್​ ತಜ್ಞ ಡಾ. ರವಿ ಕಣ್ಣನ್‌ ಅವರಿಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Ravi Kannan
Published on

ಗುವಾಹಟಿ: ಭಾರತದ ಖ್ಯಾತ ಕ್ಯಾನ್ಸರ್​ ರೋಗ ತಜ್ಞ, ಪದ್ಮಶ್ರೀ ಡಾ. ರವಿ ಕಣ್ಣನ್‌ ಅವರು 2023ನೇ ಸಾಲಿನ ರಾಮನ್​ ಮ್ಯಾಗ್ಸೆಸೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಪ್ರಶಸ್ತಿ ಏಷ್ಯಾದ ನೋಬೆಲ್​ ಎಂದೇ ಖ್ಯಾತಿ ಪಡೆದಿದೆ.

2023ನೇ ಸಾಲಿನ ರಾಮನ್​ ನ್ಯಾಗ್ಸೆಸೆ ಪ್ರಶಸ್ತಿ ನಾಲ್ವರಿಗೆ ಹಂಚಿಕೆಯಾಗಿದ್ದು, ಅದರಲ್ಲಿ ಖ್ಯಾತ ಕ್ಯಾನ್ಸರ್​ ರೋಗ ತಜ್ಞ ಡಾ. ರವಿ ಕಣ್ಣನ್‌ ಕೂಡ ಒಬ್ಬರು. ರವಿ ಅವರ ಜೊತೆಗೆ ಕೊರ್ವಿ ರಕ್ಷಂದ್​, ಯುಜೆನಿಯೊ ಲೆಮೋಸ್‌, ಮಿರಿಯನ್‌ ಕೊರೊನೆಲ್‌ ಫೆರರ್‌ಗೆ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ.

2007ರಿಂದ ಅಸ್ಸಾಂನ Cachar Cancer Hospital And Research Centre(CCHRC)ಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಬಡ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರವಿ ಕಣ್ಣನ್​ ಅವರು ಈ ಮೊದಲು ಚೆನ್ನೈನಲ್ಲಿರುವ ಅಡ್ಯಾರ್​ ಕ್ಯಾನ್ಸರ್​​ ಆಸ್ಪತ್ರೆಯಲ್ಲಿ ಹೆಡ್​ ಸರ್ಜನ್​ ಆಗಿ ಕೆಲಸ ಮಾಡುತ್ತಿದ್ದರು.

ತಮಗೆ ಪ್ರತಿಷ್ಠಿತ ನ್ಯಾಗ್ಸೆಸೆ ಪ್ರಶಸ್ತಿ ಲಭಿಸಿರುವ ಕುರಿತು ಪ್ರತಿಕ್ರಿಯಿಸಿರುವ ರವಿ ಕಣ್ಣನ್​ ಇದು ನಾನು ಕೆಲಸ ಮಾಡುತ್ತಿರುವ ಆಸ್ಪತ್ರೆಗೆ ಸಂದ ಗೌರವವಾಗಿದೆ. ನಾವು ಇಲ್ಲಿ ಒಂದು ತಂಡವಾಗಿ ಕೆಲಸ ಮಾಡುತ್ತಿದ್ದು, ನಮಗೆ ಬೆಂಬಲ ನೀಡುತ್ತಿರುವ ಪ್ರತಿಯೊಬ್ಬರು ಸಹ ಪ್ರಶಸ್ತಿ ವಿಜೇತರು ಎಂದು ಕ್ಯಾನ್ಸರ್​​​ ತಜ್ಞ ರವಿ ಕಣ್ಣನ್​ ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net