More

    ಏಷ್ಯಾಕಪ್​ 2023; ಭಾರತ ಫೈನಲ್ ಪ್ರವೇಶಿಸುವುದು ನಿಶ್ಚಿತ: ರೋಹಿತ್​ ಶರ್ಮಾ

    ಕ್ಯಾಂಡಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ಇನ್ನೂ ಕೆಲವೇ ಘಂಟೆಗಳು ಬಾಕಿ ಇದ್ದು, ಉಭಯ ತಂಡಗಳು ಸಂಪೂರ್ಣವಾಗಿ ಸಜ್ಜಾಗಿವೆ. ಇತ್ತ ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನುದ್ಧೇಶಿಸಿ ಮಾತನಾಡಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನ ತಂಡವು ಟಿ-20 ಹಾಗೂ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತ ಬಂದಿದೆ. ನಂಬರ್​ 1 ಪಟ್ಟಕ್ಕೇರಲು ಅವರು ನಿಜವಾಗಿಯೂ ಶ್ರಮ ಹಾಕಿದ್ದಾರೆ. ನಾಳೆ ನಡೆಯುವ ಪಂದ್ಯ ನಮಗೆ ಮಹತ್ವದಾಗಿದೆ. ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​ ಆಗಿ ತಂಡಕ್ಕೆ ಉತ್ತಮ ಆರಂಭ ಒದಗಿಸಿ ಕೊಡುವುದು ನನ್ನ ಕೆಲಸವಾಗಲಿದೆ.

    ಫೈನಲ್​ನಲ್ಲಿ ಆಡುತ್ತದೆ

    ಕಳೆದ ಕೆಲವು ವರ್ಷಗಳಲ್ಲಿ ನಾನು ಸಾಕಷ್ಟು ಅಪಾಯಕಾರಿ ಬ್ಯಾಟಿಂಗ್ ಮಾಡಿದ್ದೇನೆ. ಏಕದಿನ ಪಂದ್ಯಗಳಲ್ಲಿ ನಾನು ಅದನ್ನು ಸಮತೋಲನದಲ್ಲಿ ಮಾಡಬೇಕು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಆಗಿ ಉತ್ತಮ ವೇದಿಕೆ ಕಲ್ಪಿಸುವುದು ನನ್ನ ಜವಾಬ್ದಾರಿ. ನಾವು ಪಾಕ್​ ಬೌಲರ್​ಗಳ ವಿರುದ್ಧ ಆಡಲು ನಮ್ಮ ಅನುಭವವನ್ನು ಬಳಸುತ್ತೇವೆ.

    ಇದನ್ನೂ ಓದಿ: VIDEO| ಮಾನಸಿಕ ಅಸ್ವಸ್ಥೆ ಮೇಲೆ ಮಾರಣಾಂತಿಕ ಹಲ್ಲೆ

    ಟಾಸ್​ ಗೆದ್ದರೆ ಮ್ಯಾಚ್​ ಗೆದ್ದಂತೆ ಆಗುವುದಿಲ್ಲ. ನಾವು ಪಂದ್ಯವನ್ನು ಗೆಲ್ಲಲು ಉತ್ತಮ ಆಟವಾಡುವುದು ಮುಖ್ಯವಾಗಿದೆ. ನಾವು ನಾಳೆ ನಡೆಯುವ ಪಂದ್ಯದ ಜೊತೆಗೆ ಮುಂಬರುವ ಪಂದ್ಯಗಳ ಮೇಲೂ ಹೆಚ್ಚು ಕೇಂದ್ರಿಕರಿಸಬೇಕಿದೆ. ಆಡುವ 11ರ ಬಳಗವನ್ನು ಆಯ್ಕೆ ಮಾಡುವುದು ನಮಗೆ ಸವಾಲಿನ ಕೆಲಸವಾಗಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ವಿಶ್ವಕಪ್​ ಶುರುವಾಗಲಿದೆ. ಈ ನಿಟ್ಟಿನಲ್ಲಿ ನಾವು ಅಗತ್ಯ ತಯಾರಿ ನಡೆಸಬೇಕಿದೆ.

    ಪಾಕಿಸ್ತಾನದಂತಹ ತಂಡದ ವಿರುದ್ಧ ಆಡುವುದು ನಮಗೆ ಉತ್ತಮ ಸವಾಲಾಗಿದೆ. ನಾವು ಸಹ ಉತ್ತಮ ತಯಾರಿ ನಡೆಸಿದ್ದು, ಪಾಕಿಸ್ತಾನದ ವಿರುದ್ಧ ನಮ್ಮ ಯೋಜನೆಗಳ ಪ್ರಕಾರ ಆಡುತ್ತೇವೆ. ಭಾರತವು ಫೈನಲ್‌ನಲ್ಲಿ ಆಡುತ್ತದೆ ಎಮದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯಾವ ತಂಡವು ಇರಬಹುದೆಂದು ಸನ್ನೆಗಳ ಮೂಲಕ ಭಾರತ ಕ್ರಿಕೆಟ್​ ತಂಡದ ನಾಯಕ ರೋಹಿತ್​ ಶರ್ಮಾ ಸುದ್ದಿಗೋಷ್ಠಿಯಲ್ಲಿ ಖಚಿತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts