VIDEO| ಮಾನಸಿಕ ಅಸ್ವಸ್ಥೆ ಮೇಲೆ ಮಾರಣಾಂತಿಕ ಹಲ್ಲೆ

Assault
Published on

ಭೋಪಾಲ್​: ಆಘಾತಕಾರಿ ಘಟನೆಯೊಂದರಲ್ಲಿ ಪುರುಷರ ಗುಂಪೊಂದು ಮಾನಸಿಕ ಅಸ್ವಸ್ಥೆ ಮೇಲೆ ಅಮಾನುಷವಾಗಿ ಥಳಿಸಿ ಧರಧರನೆ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಘಟನೆಯೂ ಮಧ್ಯಪ್ರದೇಶದ ಸಾಗರ್​ ಜಿಲ್ಲೆಯ ಮುಖ್ಯ ಬಸ್​ ನಿಲ್ದಾಣದಲ್ಲಿ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಘಟನೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ. ಮಹಿಳೆ ಎಷ್ಟೇ ಕೇಳಿಕೊಂಡರು ಬಿಡದ ಆರೋಪಿಗಳು ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸುತ್ತಾರೆ.

ಘಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್ಚುವರಿ ಎಸ್​ಪಿ ಲೋಕೇಶ್​ ಸಿನ್ಹಾ ಸಾಗರ್​ ಜಿಲ್ಲೆಯ ಮುಖ್ಯ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಹಲ್ಲೆ ನಡೆದ ಸಂದರ್ಭದಲ್ಲಿ ಆಕೆ ತನ್ನ ಮಗುವಿನೊಂದಿಗೆ ಇದ್ದಳು ಎಂದು ತಿಳಿದು ಬಂದಿದೆ. ಯಾವ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂಬುದರ ಕುರಿತು ತಿಳಿದು ಬಂದಿಲ್ಲ.

ಪ್ರಕರಣ ಸಂಬಂಧ ಗಾಯಗೊಂಡಿರುವ ಮಹಿಳೆಯನ್ನು ಹುಡುಕಲಾಗುತ್ತಿದ್ದು, ಮೂವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನುಳಿದವರು ತಲೆಮಾರಿಸಿಕೊಂಡಿದ್ದು, ಪತ್ತೆ ಹಚ್ಚಲು ವಿಶೇಷ ತಂಡ ಒಂದನ್ನು ರಚಿಸಲಾಗಿದೆ ಎಂದು ಹೆಚ್ಚುವರಿ ಎಸ್​ಪಿ ಲೋಕೇಶ್​ ಸಿನ್ಹಾ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net