Modi Talks With Nepal PM | ನೇಪಾಳದ ನೂತನ ಪ್ರಧಾನಿ ಕರ್ಕಿ ಜೊತೆ ಮೋದಿ ಮಾತುಕತೆ; ಶಾಂತಿ ಸ್ಥಾಪನೆಗೆ ಭಾರತದ ಬೆಂಬಲವಿದೆ ಎಂದ ನಮೋ!

Modi Talks With Nepal PM
Published on

Modi Talks With Nepal PM: ನೇಪಾಳದ ನೂತನ ಪ್ರಧಾನಿಯಾಗಿ ಆಯ್ಕೆಯಾಗಿರುವ ಸುಶೀಲಾ ಕರ್ಕಿ ಅವರೊಂದಿಗೆ ಮಾತನಾಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ನೆರೆಯ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಪ್ರಯತ್ನಗಳಿಗೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.

ತಮ್ಮ ಎಕ್ಸ್​​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೋಂಡಿರುವ ಪ್ರಧಾನಿ ಮೋದಿ, ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನ ಮಂತ್ರಿ ಶ್ರೀಮತಿ ಸುಶೀಲಾ ಕರ್ಕಿ ಅವರೊಂದಿಗೆ ಆತ್ಮೀಯ ಸಂಭಾಷಣೆ ನಡೆಸಿದೆ. ಇತ್ತೀಚಿನ ದುರಂತ ಜೀವಹಾನಿಗೆ ಸಂತಾಪ ಸೂಚಿಸಿದೆ ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಪುನಃಸ್ಥಾಪಿಸುವ ಅವರ ಪ್ರಯತ್ನಗಳಿಗೆ ಭಾರತ ಬೆಂಬಲವಾಗಿ ನಿಲ್ಲುತ್ತದೆ ಎನ್ನುವುದನ್ನು ತಿಳಿಸಿದ್ದೇನೆ. ನಾಳೆ ನೇಪಾಳದ ರಾಷ್ಟ್ರೀಯ ದಿನದಂದು ನಾನು ಅವರಿಗೆ ಮತ್ತು ನೇಪಾಳದ ಜನರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಕೋರಿದ್ದೇನೆ ಎಂದು ಬರೆದಿದ್ದಾರೆ.

ಹಿಮಾಲಯನ್ ರಾಷ್ಟ್ರ ದಶಕಗಳಲ್ಲಿ ಕಂಡ ಅತ್ಯಂತ ಕೆಟ್ಟ ಅಶಾಂತಿಯ ಸ್ಥಿತಿ ಇದಾಗಿದ್ದು, ಇದರ ಬಳಿಕ ಪ್ರಧಾನಿ ಕೆ ಪಿ ಓಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಮೂರು ದಿನಗಳ ನಂತರ, ಶುಕ್ರವಾರ ಶ್ರೀಮತಿ ಕರ್ಕಿ ಅವರು ಮಧ್ಯಂತರ ಪ್ರಧಾನಿಯಾದರು. ನೇಪಾಳದ ರಾಷ್ಟ್ರಪತಿ ರಾಮಚಂದ್ರ ಪೌಡೆಲ್ ಮತ್ತು ಪ್ರತಿಭಟನೆಗಳ ನೇತೃತ್ವ ವಹಿಸಿದ್ದ ಯುವ ಪ್ರತಿಭಟನಾಕಾರರ ನಡುವಿನ ಸಭೆಯ ನಂತರ ಕರ್ಕಿ ಅವರ ಹೆಸರು ಘೋಷಣೆ ಮಾಡಲಾಯಿತು.

ಸಾಮಾಜಿಕ ಮಾಧ್ಯಮಗಳ ಮೇಲಿನ ಸರ್ಕಾರದ ನಿಷೇಧದ ವಿರುದ್ಧ ಪ್ರಾರಂಭವಾದ ವಿದ್ಯಾರ್ಥಿಗಳ ನೇತೃತ್ವದ "ಜನರಲ್ ಝಡ್" ಪ್ರತಿಭಟನೆಗಳು, ಓಲಿ ಸರ್ಕಾರ ಮತ್ತು ದೇಶದ ರಾಜಕೀಯ ಗಣ್ಯರ ವಿರುದ್ಧ ಸಾಮಾನ್ಯ ಜನರ ಬಗ್ಗೆ ಭ್ರಷ್ಟಾಚಾರ ಮತ್ತು ನಿರಾಸಕ್ತಿಯ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಟೀಕೆಗಳನ್ನು ಪ್ರತಿಬಿಂಬಿಸುವ ದೊಡ್ಡ ಅಭಿಯಾನವಾಗಿ ವಿಸ್ತರಣೆಗೊಂಡಿತು.

ನೇಪಾಳ ಎದುರಿಸುತ್ತಿರುವ ಅಸಹಜ ಸನ್ನಿವೇಶವನ್ನು ಉಲ್ಲೇಖಿಸಿ ಪ್ರಸ್ತುತ ಪರಿಸ್ಥಿತಿಗೆ ಸಾಂವಿಧಾನಿಕ ಮತ್ತು ರಾಜಕೀಯ ಪರಿಹಾರಕ್ಕೆ ದಾರಿ ಮಾಡಿಕೊಡಲು ರಾಜೀನಾಮೆ ನೀಡುತ್ತಿರುವುದಾಗಿ ಅಧ್ಯಕ್ಷ ಪೌಡೆಲ್‌ಗೆ ಬರೆದ ರಾಜೀನಾಮೆ ಪತ್ರದಲ್ಲಿ ಓಲಿ ಹೇಳಿದ್ದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net