World Championships | ನೀರಜ್ ಚೋಪ್ರಾ ಕನಸು ಭಗ್ನ; ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಹಾಲಿ ಚಾಂಪಿಯನ್​​​!

Neeraj Chopra
Published on

World Championships: ಗುರುವಾರ (ಸೆ 18) ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಹಾಲಿ ಚಾಂಪಿಯನ್ ನೀರಜ್ ಚೋಪ್ರಾ ಅವರ ಕನಸು ಭಗ್ನಗೊಂಡಿತು. ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ನಾಲ್ಕು ವರ್ಷಗಳ ಹಿಂದೆ ತಾವೂ ಒಲಿಂಪಿಕ್ ಚಿನ್ನವನ್ನು ಗೆದ್ದ ಸ್ಥಳವಾದ ಒಲಿಂಪಿಕ್ ಕ್ರೀಡಾಂಗಣದಲ್ಲಿ ನಿರಾಸೆ ಅನುಭವಿಸಿ ಎಂಟನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಚೋಪ್ರಾ 84.02 ಮೀಟರ್ ದೂರ ಎಸೆಯುವಲ್ಲಿ ಯಶಸ್ವಿಯಾದರು, ಇದು ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾದ 90.23 ಮೀಟರ್ ಗಿಂತ ತೀರಾ ಕಡಿಮೆ ಎನ್ನಲಾಗಿದೆ, ಈ ಸ್ಟಾರ್ ಜಾವೆಲಿನ್ ಎಸೆತಗಾರ ಫೈನಲ್‌ನ ಐದನೇ ಸುತ್ತಿನಲ್ಲಿ ಸೋತ ನಂತರ ನಿರಾಸೆಯಿಂದ ಹೊರನಡೆದಿದ್ದಾರೆ. ಈ ಫಲಿತಾಂಶವು ಚೋಪ್ರಾರ ವೃತ್ತಿಜೀವನದಲ್ಲಿ ದೊಡ್ಡ ಹಿನ್ನಡೆಯಾಗಿದ್ದು, ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಅವರು ಅಂತರರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ಗೆಲ್ಲುವಲ್ಲಿ ವಿಫಲರಾದರು. ಇಲ್ಲಿಯವರೆಗೂ ತಾವೂ ಭಾಗವಹಿಸಿದ ಪ್ರತಿಯೊಂದು ಸ್ಪರ್ಧೆಯಲ್ಲೂ ಮೊದಲ ಎರಡು ಸ್ಥಾನಗಳಲ್ಲಿ ಇರುತಿದ್ದರು. ಸದ್ಯ ಅವರ ನಾಲ್ಕು ವರ್ಷಗಳ ಗಮನಾರ್ಹ ಸರಣಿ ಇಂದು ಕೊನೆಗೊಂಡಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net