Maharashtra Government | ಸರ್ಕಾರದ ಅಧಿಕೃತ ವಾಹನಗಳ ಬೆಲೆ ಮಿತಿ ಪರಿಷ್ಕರಿಸಿದ ಮಹಾರಾಷ್ಟ್ರ ಸರ್ಕಾರ

Maharashtra revises official vehicle price limits
Published on

Maharashtra Government: ಮಹಾರಾಷ್ಟ್ರ ರಾಜ್ಯ ಸರ್ಕಾರ ತನ್ನ ರಾಜ್ಯ ಅಧಿಕಾರಿಗಳ ಅಧಿಕೃತ ವಾಹನಗಳ ಬೆಲೆ ಮಿತಿಗಳನ್ನು ಪರಿಷ್ಕರಿಸುವ ಹೊಸ ಸರ್ಕಾರಿ ನಿರ್ಣಯವನ್ನು (ಜಿಆರ್) ಹೊರಡಿಸಿದ್ದು, ಉನ್ನತ ಶ್ರೇಣಿಯ ಗಣ್ಯರಿಗೆ ಅನೇಕ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ.

ಪರಿಷ್ಕೃತಗೊಂಡ ನೀತಿಯಡಿಯಲ್ಲಿ, ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಇನ್ನು ಮುಂದೆ ತಮ್ಮ ಅಧಿಕೃತ ವಾಹನಗಳ ಮೇಲೆ ಬೆಲೆ ಮಿತಿಯನ್ನು ಹೊಂದಿರುವುದಿಲ್ಲ, ಇದರಿಂದಾಗಿ ಅವರು ತಮ್ಮ ಆದ್ಯತೆಯ ಪ್ರಕಾರ ವಾಹನಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಸಿಗುತ್ತದೆ.

ಹಣಕಾಸು ಇಲಾಖೆಯು ತನ್ನ ನಿರ್ಣಯದಲ್ಲಿ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ, ಹಣದುಬ್ಬರ ಮತ್ತು ಬಿಎಸ್-VI ಕಂಪ್ಲೈಂಟ್ ವಾಹನಗಳಿಗೆ ಬದಲಾವಣೆ ಬೆಲೆ ರಚನೆಯನ್ನು ಪರಿಷ್ಕರಿಸಲು ಕಾರಣಗಳ ಉಲ್ಲೇಖಿಸಿದೆ. ಇತರ ಹಿರಿಯ ಅಧಿಕಾರಿಗಳಿಗೆ, ನಿರ್ದಿಷ್ಟ ಬೆಲೆ ಮಿತಿಗಳನ್ನು ನಿಗದಿಪಡಿಸಲಾಗಿದೆ (ಜಿಎಸ್‌ಟಿ, ಮೋಟಾರು ವಾಹನ ತೆರಿಗೆ ಮತ್ತು ನೋಂದಣಿ ಶುಲ್ಕಗಳನ್ನು ಹೊರತುಪಡಿಸಿ)

ಸಂಪುಟ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ: 30 ಲಕ್ಷ ರೂ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಮತ್ತು ಪ್ರಧಾನ ಕಾರ್ಯದರ್ಶಿಗಳು: 25 ಲಕ್ಷ ರೂ.

ರಾಜ್ಯ ಮಾಹಿತಿ ಆಯುಕ್ತರು ಮತ್ತು MPSC ಸದಸ್ಯರು: 20 ಲಕ್ಷ ರೂ.

ರಾಜ್ಯ ಮಟ್ಟದ ಇಲಾಖಾ ಮುಖ್ಯಸ್ಥರು ಮತ್ತು ವಿಭಾಗೀಯ ಆಯುಕ್ತರು: 17 ಲಕ್ಷ ರೂ.

ಜಿಲ್ಲಾಧಿಕಾರಿಗಳು, ಪೊಲೀಸ್ ಆಯುಕ್ತರು ಮತ್ತು ಎಸ್‌ಪಿಗಳು: 15 ಲಕ್ಷ ರೂ.

ಇತರ ಅನುಮೋದಿತ ಅಧಿಕಾರಿಗಳು: 12 ಲಕ್ಷ ರೂ.

ವಿದ್ಯುತ್ ವಾಹನಗಳ ಬಳಕೆಗೆ ಒತ್ತು ನೀಡುವ ಸಲುವಾಗಿ, ಸರ್ಕಾರ ನಿಗದಿತ ಬೆಲೆ ಮಿತಿಗಿಂತ ಶೇಕಡಾ 20 ರಷ್ಟು ಹೆಚ್ಚಿನ ಬೆಲೆಗೆ ಇವಿ ಖರೀದಿಸಲು ಅನುಮತಿ ನೀಡಿದೆ. ಹೆಚ್ಚುವರಿಯಾಗಿ, ವಿಪತ್ತು ನಿರ್ವಹಣೆಯಲ್ಲಿ ತೊಡಗಿರುವ ಕ್ಷೇತ್ರ ಅಧಿಕಾರಿಗಳು 12 ಲಕ್ಷ ರೂ.ಗಳವರೆಗೆ ಬೆಲೆಯ ಬಹು-ಉಪಯುಕ್ತ ವಾಹನಗಳನ್ನು (ಎಂಯುವಿ) ಖರೀದಿಸಲು ಅನುಮತಿ ನೀಡಲಾಗಿದೆ.ಪರಿಷ್ಕೃತ ನೀತಿಯು ಸೆಪ್ಟೆಂಬರ್ 17, 2025 ರಂದು ಜಾರಿಗೆ ಬಂದಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net