ಬೆಂಗಳೂರು ಹೊರವಲಯದ ಕೆರೆಯಲ್ಲಿ ಅಪರೂಪದ ಮೀನುಗಳು ಪತ್ತೆ! ಇವುಗಳು ವಿಶೇಷತೆ ಏನು?

Fish
Published on

ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಕೆರೆಯೊಂದರಲ್ಲಿ ವಿಚಿತ್ರ ಹಾಗೂ ಅಪರೂಪದ ಮೀನುಗಳು ಬಲಗೆ ಬಿದ್ದಿದ್ದು, ಸ್ಥಳೀಯರನ್ನು ಹುಬ್ಬೇರಿಸುವಂತೆ ಮಾಡಿದೆ.

ಆನೇಕಲ್ ತಾಲೂಕಿನ ಮಾಯಸಂದ್ರ ಕೆರೆಯಲ್ಲಿ ರೆಕ್ಕೆ-ಪುಕ್ಕ ಹೊಂದಿರುವಂತೆ ಕಾಣುವ ಮೀನುಗಳು ಪತ್ತೆಯಾಗಿವೆ. ಬೆಂಗಳೂರು ಹೊರವಲಯದಲ್ಲೇ ಈ ಕೆರೆ ಇದೆ. ಪ್ರತಿ ವಾರದಂತೆ ಈ ವಾರವೂ ಕೆರೆಯಲ್ಲಿ ಮೀನು ಹಿಡಿಯಲು ಟೆಂಡರ್ ಪಡೆದವರು ಬಲೆ ಬೀಸಿದ್ದರು.

ನಿನ್ನೆ ಸಂಜೆ ಬಲೆ ಹಾಕಿದಾಗ ಈ ಚಿತ್ರ ರೀತಿಯ ಮೀನುಗಳು ಪತ್ತೆಯಾಗಿವೆ. ದೇಹದ ಭಾಗ ಕಲ್ಲಿನಂತಿದ್ದು, ಒಂದೊಂದು ಮೀನು ಒಂದೂವರೆಯಿಂದ 2 ಕೆಜಿ ತೂಕ ಇವೆ. ಬಲೆ ಹಾಕಿದಾಗ ನೂರಾರು ಮೀನುಗಳು ಬಿದ್ದಿರುವ ಹಿನ್ನೆಲೆಯಲ್ಲಿ ಆ ಮೀನುಗಳನ್ನು ಮಾರಾಟ ಮಾಡದೆ ಅವುಗಳನ್ನು ಪ್ರತ್ಯೇಕವಾಗಿ ಇಡಲಾಗಿದೆ.

ಸಕರ್​ಮೌತ್​ ಕ್ಯಾಟ್​ಫಿಶ್​

ಈ ಮೀನುಗಳುನ್ನು ಹೈಪೋಸ್ಟೊಮಸ್ ಪ್ಲೆಕೋಸ್ಟೊಮಸ್ ಅಥವಾ ಸಕರ್‌ಮೌತ್ ಕ್ಯಾಟ್‌ಫಿಶ್ ಅಥವಾ ಕಾಮನ್ ಪ್ಲೆಕೊ ಎಂದೂ ಕರೆಯುತ್ತಾರೆ. ಇದು ಶಸ್ತ್ರಸಜ್ಜಿತ ಬೆಕ್ಕುಮೀನು ಕುಟುಂಬಕ್ಕೆ (ಲೋರಿಕಾರಿಡೆ) ಸೇರಿದ ಉಷ್ಣವಲಯದ ಸಿಹಿನೀರಿನ ಮೀನಾಗಿದೆ. ಈ ಸಕರ್‌ಮೌತ್ ಕ್ಯಾಟ್‌ಫಿಶ್ ಅನ್ನು ಹೆಚ್ಚಾಗಿ ಸೇವಿಸುವುದಿಲ್ಲ. ಆದರೂ ಕೆಲವೆಡೆ ಇದನ್ನು ಸೇವಿಸುತ್ತಾರೆ. ಆದರೆ, ಈ ಮೀನುಗಳಿಗೆ ಅಕ್ವೇರಿಯಂ ವ್ಯವಹಾರದಲ್ಲಿ ತುಂಬಾ ಬೇಡಿಕೆ ಇದೆ. ಇವುಗಳನ್ನು ಅಕ್ವೇರಿಯಂ ಬಾಟಮ್​ ಕ್ಲೀನರ್​ ಎಂದು ಕರೆಯಲಾಗುತ್ತದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net