

Female Dogs : ಹಲವು ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ(ಏ.12) ಪೊಲೀಸರು ಬಂಧಿಸಿದ್ದಾರೆ.
ದೆಹಲಿಯ ಶಹದಾರಾ ಜಿಲ್ಲೆಯ ಕೈಲಾಶ್ ನಗರ ಪ್ರದೇಶದಲ್ಲಿ ಈ ಆಘಾತಕಾರಿ ಮತ್ತು ಅತ್ಯಂತ ಭಯಾನಕ ಘಟನೆ ಬಬೆಳಕಿಗೆ ಬಂದಿದೆ. ನೌಶಾದ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಇತ ಎನ್ಜಿಒನಲ್ಲಿ ಕೆಲಸ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ ನಾಯಿಯ ಮೇಲೆ ದೌರ್ಜನ್ಯ ಎಸಗುತ್ತಿರುವ ಹಾಗೂ ಎಷ್ಟು ನಾಯಿಗಳ ಮೇಲೆ ಅತ್ಯಾಚಾರ ಮಾಡಿದ್ದಾಗಿ ಹೇಳುತ್ತಿರುವ ವಿಡಿಯೋಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಪ್ರಾಣಿ ಕಾರ್ಯಕರ್ತನೊಬ್ಬ ತನ್ನ ಎಕ್ಸ್ ಕಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ವಿಡಿಯೋವನ್ನು ದೆಹಲಿ ಪೊಲೀಸ್, ಸಿಎಂ ಹಾಗೂ ಹಲವು ರಾಜಕಾರಣಿಗಳಿಗೆ ಟ್ಯಾಗ್ ಮಾಡಿದ್ದಾರೆ. ಇದರಿಂದ ಕೂಡಲೇ ಎಚ್ಚತ್ತ ಪೊಲೀಸರು, ಆರೋಪಿ ನೌಶಾದ್ ಅನ್ನು ಬಂಧಿಸಿದ್ದಾರೆ.
ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವ್ಯಕ್ತಿಯೂ ಕನಿಷ್ಠ 12-13 ಹೆಣ್ಣು ನಾಯಿಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಕೇಳಿಬಂದಿದೆ.(ಏಜೆನ್ಸೀಸ್)