ಪದೇಪದೆ ಒತ್ತಡ, ಆತಂಕಕ್ಕೆ ಒಳಗಾಗುವರಲ್ಲಿ ಈ 5 ಕಾಯಿಲೆಗಳ ಅಪಾಯ ಸಾಧ್ಯತೆ ಅಧಿಕ! | Stress

dk - 2025-04-12T202429.124
Published on

Stress : ದಿನನಿತ್ಯದ ಬದುಕಿನ ಜಂಜಾಟದಲ್ಲಿ ಮನುಷ್ಯ ಒತ್ತಡ ಅನುಭವಿಸೋದು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಬಹೃತ್​ ನಗರಗಳು ಸೇರಿದಂತೆ ಎಲ್ಲಾ ಸಿಟಿಗಳಲ್ಲಿ ಬದುಕುವ ಜೀವನವೇ ಒತ್ತಡ ಎಂದೇ ಹೇಳಬಹುದು.

ಹೌದು, ಪ್ರತಿ ಆಫಿಸ್​ನಲ್ಲಿ ಒಂದಲ್ಲೊಂದು ವಿಚಾರಕ್ಕೆ ಒತ್ತಡ, ಕಿರುಕುಳ ಅನುಭವಿಸುತ್ತಾರೆ ಹಾಗೂ ಮನೆಯಲ್ಲಿ ಕೂಡ ಕೆಲ ಬಾರಿ ಕೌಟುಂಬಿಕ ಕಲಹಗಳು ಹಿನ್ನೆಲೆ ಕಿರುಕುಳ ಎದುರಿಸುತ್ತಾರೆ. ಹೀಗಾಗಿ, ನಕಾರಾತ್ಮಕ ವಿಷಯಗಳನ್ನು ಯೋಚಿಸುವುದು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲದೆ ದೈಹಿಕ ಆರೋಗ್ಯಕ್ಕೂ ಹಾನಿ ಮಾಡುತ್ತದೆ. ಒತ್ತಡ ಮತ್ತು ನಕಾರಾತ್ಮಕ ಚಿಂತನೆಯಿಂದ ಉಂಟಾಗಬಹುದಾದ ಐದು ಕಾಯಿಲೆಗಳ ತಿಳಿಯೋಣ..

ನಕಾರತ್ಮಕ ಚಿಂತನೆಯೂ ಒಬ್ಬ ವ್ಯಕ್ತಿಯನ್ನು ಎಷ್ಟು ತೊಂದೆರೆಗೊಳಿಸುತ್ತದೆ ಎಂದು ನೀವು ಊಹಿಸಲು ಅಸಾಧ್ಯ. ನಕಾರಾತ್ಮಕ ಚಿಂತನೆ, ಒತ್ತಡ ಅಥವಾ ಆತಂಕವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಆದರೆ, ತಜ್ಞರು ಆಲೋಚನೆಯು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಂಬುತ್ತಾರೆ.

1. ಜಠರ ರೋಗ

ಜಠರಗರುಳಿನ ಕಾಯಿಲೆಗಳು ಎಂದರೆ ಮಲಬದ್ಧತೆ, ಅತಿಸಾರ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುವ ಸ್ಥಿತಿಗಳಾಗಿವೆ. ಒತ್ತಡ ಮತ್ತು ಆತಂಕದಿಂದಾಗಿ ಈ ಸಮಸ್ಯೆ ಉಂಟಾಗಬಹುದು. ವಾಸ್ತವವಾಗಿ, ನಕಾರಾತ್ಮಕ ಚಿಂತನೆಯು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಸೃಷ್ಟಿಸುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

2.ಹೃದ್ರೋಗ ಸಮಸ್ಯೆ

ನೀವು ಹೆಚ್ಚು ನಕಾರತ್ಮ ಚಿಂತನೆ ಮಾಡಿದರೆ ಅಂದರೆ, ಆತಂಕ ಮತ್ತು ಖಿನ್ನತೆಗೆ ಒಳಪಟ್ಟರೆ ಅದು ನಿಮ್ಮ ಹೃದಯಬಡಿತವನ್ನು ಹೆಚ್ಚಿಸಬಹುದು. ಇದು ಹೃದಯಘಾತವನ್ನು ಹೆಚ್ಚಿಸುತ್ತದೆ.

3. ಬೆನ್ನಿನ್ನ ಕೆಳಭಾಗ ಸಮಸ್ಯೆ

ನಕಾರತ್ಮ ಚಿಂತನೆಯೂ ಬೆನ್ನು ನೋವಿಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಆತಂಕ, ಖಿನ್ನತೆ ಮತ್ತು ಒತ್ತಡದಲ್ಲಿ ಕಂಡುಬರುತ್ತದೆ.

4. ಬಿಪಿ ಸಮಸ್ಯೆ

ನಕಾರತ್ಮ ಚಿಂತನೆಯೂ ಆಗಾಗ್ಗೆ, ಅತಿಯಾಗಿ ಯೋಚಿಸುವುದು, ನಕಾರಾತ್ಮಕ ಚಿಂತನೆ ಅಥವಾ ಒತ್ತಡವು ರಕ್ತದೊತ್ತಡದ ಅಸಮತೋಲನಕ್ಕೆ ಕಾರಣವಾಗುತ್ತದೆ ಮತ್ತು ರಕ್ತದೊತ್ತಡ ವೇಗವಾಗಿ ಹೆಚ್ಚಾಗಬಹುದು.

5.ಥೈರಾಯ್ಡ್

ಒತ್ತಡದಿಂದಲೂ ಥೈರಾಯ್ಡ್ ಸಮಸ್ಯೆಗಳು ಹೆಚ್ಚಾಗಬಹುದು ಎಂಬುದು ಹಲವು ವರದಿಗಳಲ್ಲಿ ಸಾಬೀತಾಗಿದೆ. ಇಷ್ಟೇ ಅಲ್ಲ, ಇದು ಬೊಜ್ಜು ಮತ್ತು ಹೊಟ್ಟೆಯ ಕೊಬ್ಬನ್ನು ಕೂಡ ಹೆಚ್ಚಿಸುತ್ತದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net