ಅತ್ಯಾಚಾರ ಪ್ರಕರಣ: ನಟ ಆಶಿಶ್ ಕಪೂರ್ ಗೆ ಜಾಮೀನು! | Ashish Kapoor

Untitled design - 2025-09-12T140656.214
Published on

Ashish Kapoor : ಪುಣೆಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಟಿವಿ ನಟ ಆಶಿಶ್ ಕಪೂರ್ ಬಂಧಿಸಿದ್ದು, ವಿಚಾರಣೆಯ ನಂತರ ಆತನಿಗೆ ದೆಹಲಿಯ ತೀಸ್​ ಹಜಾರಿ ನ್ಯಾಯಾಲಯ ಬುಧವಾರ (ಸೆಪ್ಟೆಂಬರ್​ 10) ಜಾಮೀನು ನೀಡಿದೆ.

ಷರತ್ತುಗಳೇನು?

ಹೆಚ್ಚುವರಿ ಸೆಷನ್ಸ್​ ನ್ಯಾಯಧೀಶ ಭೂಪಿಂದರ್ ಸಿಂಗ್, ನಟನಿಗೆ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಪಾಲಿಸಬೇಕು ಎಂದು ಎಚ್ಚರಿಸಿದೆ ಈ ವೇಳೆ, 1 ಲಕ್ಷ ರೂ.ಗಳ ಜಾಮೀನು ಬಾಂಡ್‌ಗೆ ಸಹಿ ಹಾಕಿ ಶ್ಯೂರಿಟಿ ನೀಡಬೇಕು ಹಾಗೆಯೇ ಮೊಬೈಲ್​ನ್ನು ಯಾವಾಗಲೂ ಸಕ್ರಿಯವಾಗಿಟ್ಟು ಕೊಳ್ಳಬೇಕೆಂದು ನ್ಯಾಯಾಲಯ ತಿಳಿಸಿದೆ.

ಪ್ರಕರಣದಲ್ಲಿ ನೀಡಿದ ದೂರಿನ ಆಧಾರದ ಮೇಲೆ ದಾಖಲೆಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಎಲ್ಲಾ ಚರ್ಚೆಗಳನ್ನು ನ್ಯಾಯಾಲಯವು ಗಮನದಲ್ಲಿಟ್ಟುಕೊಂಡಿದೆ. ಇನ್ನು ನಟ ಆಶೀಶ್ ಇನ್ನು ಮುಂದೆ ತನಿಖೆಗೆ ಅಗತ್ಯವಿಲ್ಲ ಎಂದು ಬಿಡುಗಡೆಗೊಳಿಸಿದ್ದಾರೆ.

ನಟನನ್ನು ಐದು ದಿನಗಳ ಕಾಲ ಪಿಸಿ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ದರು, ಆದರೆ, ಕೇಂದ್ರ ಜಿಲ್ಲಾ ನ್ಯಾಯಾಂಗ ಮ್ಯಾಜಿಸ್ಟ್ರೇಟ್ 4 ದಿನಗಳ ಕಾಲ ಮಾತ್ರ ಅನುಮತಿಯನ್ನು ನೀಡಿತ್ತು. ಆದರೆ, ಕೇವಲ ಮೂರು ದಿನಗಳಲ್ಲಿ ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಆರೋಪಿ ಸಮಾಜದಲ್ಲಿ ಉತ್ತಮವಾಗಿ ನೆಲೆಸಿದ್ದು, ವ್ಯವಹಾರದ ಜವಬ್ದಾರಿಗಳನ್ನು ಹೊಂದಿರುವುದರಿಂದ ತನಿಖೆಯ ವಿಚಾರಣೆಗೆ ಸಹಕರಿಸಲು ಸಹಾಯ ಮಾಡಿದ್ದಾರೆ. ಹಾಗೆಯೇ, ಈ ವೇಳೆ ಮೊಬೈಲ್ ಫೋನ್ ಅನ್ನು ಮರುಪಡೆಯಲು ಯಾವುದೇ ಪ್ರಾಮಾಣಿಕ ಪ್ರಯತ್ನಗಳು ಮಾಡಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net