

9 ಮಕ್ಕಳ ತಾಯಿಯಾದ ಮಹಿಳೆ ತನ್ನ ಗಂಡ ಮತ್ತು ಕುಟುಂಬವನ್ನು ಬಿಟ್ಟು 32 ವರ್ಷದ ವ್ಯಕ್ತಿಯೊಂದಿಗೆ ಪರಾರಿಯಾಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಇದೀಗ ಬೆಳಕಿಗೆ ಬಂದಿದೆ.
ಆ ಮಹಿಳೆ ತನ್ನ 10 ವರ್ಷದ ಮಗಳನ್ನು ಕರೆದುಕೊಂಡು ಹೋಗಿದ್ದಲ್ಲದೆ, ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಆಭರಣಗಳು, ನಗದು ಮತ್ತು ಜಮೀನಿನ ದಾಖಲೆಗಳನ್ನು ಸಹ ತೆಗೆದುಕೊಂಡು ಹೋಗಿದ್ದು, ಈ ಘಟನೆ ಇಡೀ ಪ್ರದೇಶದಲ್ಲಿ ಸಂಚಲನ ಮೂಡಿಸಿದೆ.
"ನನ್ನ 32 ವರ್ಷದ ವೈವಾಹಿಕ ಜೀವನ ನಾಶವಾಯಿತು. ನಾನು ಕುಟುಂಬವನ್ನು ಪೋಷಿಸಲು ಕಷ್ಟಪಟ್ಟು ದುಡಿದಿದ್ದೇನೆ, ಮಕ್ಕಳನ್ನು ಬೆಳೆಸಿದ್ದೇನೆ ಮತ್ತು ನನ್ನ ಹೆಂಡತಿಯ ಹೆಸರಿನಲ್ಲಿ ನಾಲ್ಕು ಎಕರೆ ಭೂಮಿಯನ್ನು ಖರೀದಿಸಿದೆ. ಆದರೆ ಅವಳು ಎಲ್ಲವನ್ನೂ ಬಿಟ್ಟು ಸಂಬಂಧವನ್ನು ಮುರಿದುಕೊಂಡಳು" ಎಂದು ನೀಲಂ( ಓಡಿ ಹೋದವಳು) ಅವರ ಪತಿ ಓಂಪಾಲ್ ಹೇಳಿದ್ದಾನೆ.
ನಮ್ಮ ಮದುವೆಯಾಗಿ 32 ವರ್ಷಗಳಾಗಿವೆ.ದಂಪತಿಗೆ ಒಟ್ಟು 9 ಮಕ್ಕಳಿದ್ದಾರೆ. ಇದರಲ್ಲಿ 5 ಹೆಣ್ಣುಮಕ್ಕಳು ಮತ್ತು 4 ಗಂಡು ಮಕ್ಕಳಿದ್ದಾರೆ ಎಂದು ಓಂಪಾಲ್ ಮಾಧ್ಯಮದ ಮುಂದೆ ಅಳುತ್ತಾ ಹೇಳಿದ್ದಾನೆ.
ಮಾಹಿತಿಯ ಪ್ರಕಾರ, ಮಹಿಳೆ ಸುಮಾರು 20 ದಿನಗಳಿಂದ ಕಾಣೆಯಾಗಿದ್ದರು. ಏತನ್ಮಧ್ಯೆ, ಕುಟುಂಬವು ಪೊಲೀಸರಿಗೆ ಕಾಣೆಯಾದ ವ್ಯಕ್ತಿಯ ದೂರು ದಾಖಲಿಸಿದೆ. ಹುಡುಕಾಟ ಆರಂಭಿಸಿದರು ಮತ್ತು ಅಂತಿಮವಾಗಿ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಕಾಸ್ಲಂಜ್ ಜಿಲ್ಲೆಯ ಬಹೇದಿಯಾ ಗ್ರಾಮದಲ್ಲಿ ಕೊನೆಗೂ ಪೊಲೀಸರು ಪತ್ತೆಹಚ್ಚಿದರು. ಆ ಮಹಿಳೆ ಮತ್ತೆ ಓಂಪಾಲ್ ಕುಟುಂಬಕ್ಕೆ ಬರಲು ನಿರಾಕರಿಸಿದ್ದಾಳೆ ಎಂದು ವರದಿಯಾಗಿದೆ. (ಏಜೆನ್ಸೀಸ್)